alex Certify
ಕನ್ನಡ ದುನಿಯಾ       Mobile App
       

Kannada Duniya

ಆಲಿಯಾ, ಶ್ರದ್ಧಾ, ಕಂಗನಾಗೆ ಸ್ವಯಂವರದಲ್ಲಿ ಕೂಡಿ ಬಂತು ಕಂಕಣ

ಭಾರತದಲ್ಲಿ ಚಿತ್ರ-ವಿಚಿತ್ರ ಸಂಪ್ರದಾಯಗಳಿವೆ. ಇದೀಗ ಉತ್ತರಾಖಂಡ್ ನ ತೆಹ್ರಿ ಗರ್ವಾಲ್ ಜಿಲ್ಲೆಯಲ್ಲಿ ಕುರಿಗಳಿಗೆ ಮದುವೆ ಮಾಡಲಾಗಿದೆ. ಅವುಗಳ ಹೆಸರೇನು ಗೊತ್ತಾ? ಆಲಿಯಾ, ಶ್ರದ್ಧಾ ಹಾಗೂ ಕಂಗನಾ. ಇವರ ವಿವಾಹಕ್ಕೆ ಸ್ವಯಂವರವನ್ನೇ ಏರ್ಪಡಿಸಲಾಗಿತ್ತು.

ಬಬ್ಲು, ಸೋನು ಹಾಗೂ ನಂದು ಎಂಬ ಗಂಡು ಕುರಿಗಳು ಸ್ವಯಂವರದಲ್ಲಿ ಆಲಿಯಾ, ಶ್ರದ್ಧಾ ಮತ್ತು ಕಂಗನಾಳನ್ನು ವರಿಸಿವೆ. ಮದುವೆಯಲ್ಲಿ ಸಂಭ್ರಮಕ್ಕೇನೂ ಕೊರತೆ ಇರಲಿಲ್ಲ. ಊರ ಮಂದಿಯೆಲ್ಲಾ ಆಗಮಿಸಿದ್ದರು. ಹಾಡು, ಕುಣಿತ ಜೋರಾಗಿತ್ತು.

ಜೊತೆಗೆ ಭೂರಿ ಭೋಜನದ ವ್ಯವಸ್ಥೆಯೂ ಇತ್ತು. ಪ್ರಾಣಿಗಳ ತಳಿಸಂವರ್ಧನೆ ಬಗ್ಗೆ ಅರಿವು ಮೂಡಿಸಲು ಬಕ್ರಿ ಸ್ವಯಂವರ ಏರ್ಪಡಿಸಲಾಗಿತ್ತು. ಸರಳ ವಿಧಾನದ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವುದು ಈ ಮದುವೆಯ ಉದ್ದೇಶ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...