alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ನೋಡಿ ಫೇಸ್ ಬುಕ್ ನಿಂದಾದ ರಿಯಲ್ ಲವ್ ಸ್ಟೋರಿ

slum-storyಸಾಮಾಜಿಕ ಜಾಲತಾಣಗಳ ಮೂಲಕ ಆಗುತ್ತಿದ್ದ ಪ್ರೀತಿ, ಮೋಸ, ವಂಚನೆ ಸುದ್ದಿಗಳನ್ನೇ ಕೇಳುತ್ತಿದ್ದವರಿಗೆ ಈ ರಿಯಲ್ ಲವ್ ಸ್ಟೋರಿ ನಿಜಕ್ಕೂ ಮಾದರಿಯಾಗಿದೆ. ಅಮೆರಿಕಾದ ಮಹಿಳೆಯೊಬ್ಬಳು ಫೇಸ್ ಬುಕ್ ನಲ್ಲಿ ಪರಿಚಯವಾದ ಸ್ಲಂ ನಿವಾಸಿಯೊಬ್ಬನನ್ನು ಭಾರತಕ್ಕೆ ಬಂದು ವಿವಾಹವಾಗಿದ್ದಾಳೆ.

ಅಮೆರಿಕಾದ 41 ವರ್ಷದ ಎಮಿಲಿಗೆ ಫೇಸ್ ಬುಕ್ ನಲ್ಲಿ ಅಹ್ಮದಾಬಾದ್ ಸ್ಲಂ ನಿವಾಸಿ 23 ವರ್ಷದ ಹಿತೇಶ್ ಚಾವ್ಡಾನ ಪರಿಚಯವಾಗಿದೆ. ಎಮಿಲಿಗೆ ಹಿಂದಿ ಗೊತ್ತಿಲ್ಲ. ಹಿತೇಶ್ ಗೆ ಇಂಗ್ಲೀಷ್ ಬರಲ್ಲ. ಕಡೆಗೆ ಅವರಿಬ್ಬರ ಸಂವಹನಕ್ಕೆ ನೆರವಾಗಿದ್ದು ಗೂಗಲ್ ಟ್ರಾನ್ಸ್ ಲೇಟ್. ಎಮಿಲಿ ಕಳುಹಿಸುತ್ತಿದ್ದ ಸಂದೇಶಗಳನ್ನು ಹಿತೇಶ್ ಗೂಗಲ್ ಟ್ರಾನ್ಸ್ ಲೇಟ್ ನಲ್ಲಿ ಅರ್ಥೈಸಿಕೊಂಡು ತಾನು ಹೇಳಬೇಕಾದದ್ದನ್ನು ಹಿಂದಿಯಲ್ಲಿ ಟೈಪ್ ಮಾಡಿ ಮತ್ತದೇ ಗೂಗಲ್ ಟ್ರಾನ್ಸ್ ಲೇಟ್ ಮೂಲಕ ಇಂಗ್ಲೀಷ್ ನಲ್ಲಿ ಎಮಿಲಿಗೆ ಕಳುಹಿಸಿದ್ದಾನೆ.

ತನ್ನ ಬಗ್ಗೆ ಮುಚ್ಚುಮರೆಯಿಲ್ಲದಂತೆ ಎಲ್ಲವನ್ನೂ ಹಿತೇಶ್ ಹೇಳಿಕೊಂಡಿದ್ದು, ಇದು ಎಮಿಲಿಗೆ ಇಷ್ಟವಾಗಿದೆ. ಆಕೆ ಭಾರತಕ್ಕೆ ಬಂದು ಹಿತೇಶ್ ನನ್ನು ಹಿಂದೂ ಸಂಪ್ರದಾಯ ರೀತ್ಯಾ ವಿವಾಹವಾಗಿದ್ದಾಳೆ. ಮೊದಲಿಗೆ ಈ ವಿವಾಹಕ್ಕೆ ಹಿತೇಶ್ ಮನೆಯವರು ವಿರೋಧ ವ್ಯಕ್ತಪಡಿಸಿದರೂ ಇದೀಗ ರಾಜಿಯಾಗಿದ್ದಾರೆ. ವಿವಾಹ ಮಾಡಿಕೊಂಡ ದಂಪತಿಗಳು ಹನಿಮೂನ್ ಗಾಗಿ ಅಮೆರಿಕಾಕ್ಕೆ ತೆರಳಲಿದ್ದು, ಬಳಿಕ ಪತಿಯೊಂದಿಗೆ ಭಾರತದಲ್ಲೇ ನೆಲೆಸಲು ಎಮಿಲಿ ನಿರ್ಧರಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...