alex Certify
ಕನ್ನಡ ದುನಿಯಾ       Mobile App
       

Kannada Duniya

12ನೇ ಕ್ಲಾಸ್ ಅರ್ಹತೆಯ ಹುದ್ದೆಗೆ ಅರ್ಜಿ ಸಲ್ಲಿಸಿದವರು ಯಾರ್ಯಾರು ಗೊತ್ತಾ?

ಪರಿಸ್ಥಿತಿ ಎಲ್ಲಿಗೆ ತಲುಪಿತು ನೋಡಿ. ತೆಲಂಗಾಣದಲ್ಲಿ ಇತ್ತೀಚೆಗೆ ಗ್ರಾಮ ಕಂದಾಯ ಅಧಿಕಾರಿ(ವಿಲೇಜ್ ರೆವೆನ್ಯೂ ಆಫಿಸರ್) ಹುದ್ದೆಗೆ ಅರ್ಜಿ ಕರೆದಿದ್ದರು. ಅದಕ್ಕಿದ್ದ ವಿದ್ಯಾರ್ಹತೆ ಕೇವಲ ಪಿಯುಸಿ ಮಾತ್ರ. ಸುಮಾರು 700 ಪೋಸ್ಟ್ ಗಳಿಗೆ ಬಂದಿದ್ದ ಅರ್ಜಿಗಳ ಸಂಖ್ಯೆಯೇ ಹತ್ತೂವರೆ ಲಕ್ಷ!

ಇದರಲ್ಲೇನು ವಿಶೇಷ ಎಂದು ಕೇಳ್ಬೇಡಿ. ಕಾರಣ ವಿಷಯ ಇರೋದು ಇಲ್ಲೇ. ಅಷ್ಟೂ ಅರ್ಜಿಗಳನ್ನು ಪರಿಶೀಲಿಸಿದ ತೆಲಂಗಾಣ ರಾಜ್ಯ ಲೋಕ ಸೇವಾ ಆಯೋಗ(ಟಿ.ಎಸ್.ಪಿ.ಎಸ್.ಸಿ) ದ ಸಿಬ್ಬಂದಿ ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಕಾರಣ 12 ತರಗತಿ ಪಾಸಾಗಿದ್ದರೆ ಸಾಕಾಗಿದ್ದ ಹುದ್ದೆಗೆ ಅರ್ಜಿ ಸಲ್ಲಿಸಿದವರಲ್ಲಿ ಶೇ.80ರಷ್ಟು ಮಂದಿ ಪಿಎಚ್.ಡಿ, ಎಂ,ಫಿಲ್, ಎಂಜಿನಿಯರಿಂಗ್ ಮತ್ತಿತರ ಪದವಿ, ಸ್ನಾತಕೋತ್ತರ ಪದವೀಧರರೇ ಇದ್ದರು!

ಸರ್ಕಾರಿಯೋ ಖಾಸಗಿಯೋ ಅಂತೂ ಯಾವುದೋ ಒಂದು ಕೆಲಸ ಸಿಕ್ಕರೆ ಸಾಕು ಎಂಬ ಪರಿಸ್ಥಿತಿ ಇರುವ ಇಂದಿನ ದಿನಮಾನಗಳಲ್ಲಿ ಸಣ್ಣ ಹುದ್ದೆಗಳಿಗೆ ಹೆಚ್ಚು ಕಲಿತವರು ಅರ್ಜಿ ಸಲ್ಲಿಸುವುದು ಹೊಸತೇನಲ್ಲ. ಆದರೆ ತೆಲಂಗಾಣದಲ್ಲಿ ಈ ಬೆಳವಣಿಗೆ ಜಾಸ್ತಿ ಇದೆ ಎನ್ನಲಾಗಿದೆ. 2011ರಲ್ಲಿ ಸಂಯುಕ್ತ ಆಂಧ್ರಪ್ರದೇಶದಲ್ಲಿ ಈ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದಾಗಲೂ 6 ಲಕ್ಷಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದಿದ್ದವು. ಈ ಬಾರಿ ಕೇವಲ ತೆಲಂಗಾಣದಲ್ಲಿ ಅದರ ಹೆಚ್ಚೂ ಕಮ್ಮಿ ಎರಡು ಪಟ್ಟು ಹೆಚ್ಚಾಗಿದೆ. ಈ ಬಾರಿಯೂ ಅವಿಭಜಿತ ರಾಜ್ಯಗಳಲ್ಲಿ ಒಟ್ಟಾಗಿ ಅರ್ಜಿ ಕರೆದಿದ್ದರೆ ತಿರುಪತಿ ತಿಮ್ಮಪ್ಪನೇ ಕಾಪಾಡಬೇಕಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...