alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗುಬಡಿಸುತ್ತೆ ರೈತರಿಗೆ ಸಿಕ್ಕಿರೋ ಬೆಳೆ ವಿಮೆಯ ಮೊತ್ತ

ತಮಿಳುನಾಡಿನ ರೈತರಿಗೆ ಸಿಕ್ಕಿರೋ ಬೆಳೆ ವಿಮೆ ಮೊತ್ತವನ್ನು ನೋಡಿದ್ರೆ ಎಂಥವರಿಗೂ ಶಾಕ್ ಆಗುತ್ತೆ. ಯಾಕಂದ್ರೆ ರೈತರಿಗೆ  ಸಿಕ್ಕಿರೋದು 3, 4, 5, 10 ರೂಪಾಯಿ ಹೀಗೆ ಬಿಡಿಗಾಸಿನ ಪರಿಹಾರ. ವಿಪಕ್ಷ ನಾಯಕ ಎಂ.ಕೆ.ಸ್ಟಾಲಿನ್ ಈ ವಿಚಾರವನ್ನು ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.

ಅಷ್ಟೇ ಅಲ್ಲ ರೈತರಿಗೆ ನೀಡಿರೋ ಚೆಕ್ ಕೂಡ ಪ್ರದರ್ಶಿಸಲಾಗಿದೆ. ಸಿಕ್ಕಿರೋ 3 ರೂಪಾಯಿ, 5 ರೂಪಾಯಿ ಪರಿಹಾರ ಮೊತ್ತವನ್ನು ಪಡೆಯಲು ರೈತರು 500 ರೂಪಾಯಿ ಕೊಟ್ಟು ಬ್ಯಾಂಕ್ ಖಾತೆ ತೆರಯಬೇಕು ಅಂತಾ ಡಿಎಂಕೆ ಶಾಸಕ ಕೆ.ಪಿಟ್ಚಂಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ಸಮಝಾಯಿಷಿ ನೀಡಿದ ಆಡಳಿತ ಪಕ್ಷದ ಸದಸ್ಯರು ಚೆಕ್ ವಿತರಣೆ ವೇಳೆ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸೋದಾಗಿ ಭರವಸೆ ನೀಡಿದ್ದಾರೆ. ಕಚೇರಿಯಲ್ಲಿ ಸಿಬ್ಬಂದಿಯ ಕೊರತೆಯಿಂದಾಗಿ ಈ ಪ್ರಮಾದ ಆಗಿದೆ ಅಂತಾ ಜವಳಿ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...