alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರ್ಖಾನೆಯಲ್ಲಿ ಪ್ರತಿನಿತ್ಯ ಮೊಳಗುತ್ತೆ ರಾಷ್ಟ್ರ ಗೀತೆ

ಈ ಹಿಂದೆ ಸಿನಿಮಾ ಹಾಲ್ ಗಳಲ್ಲಿ ಚಿತ್ರ ಪ್ರದರ್ಶನಕ್ಕೂ ಮುನ್ನ ರಾಷ್ಟ್ರ ಗೀತೆ ಮೊಳಗಿಸಬೇಕೆಂಬ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿತ್ತು. ಆದರೆ ಬಳಿಕ ಈ ಆದೇಶವನ್ನು ಹಿಂಪಡೆಯಲಾಗಿತ್ತು. ಆದರೆ ಗುಜರಾತಿನ ಕಾರ್ಖಾನೆಯೊಂದರಲ್ಲಿ ಪ್ರತಿನಿತ್ಯ ರಾಷ್ಟ್ರ ಗೀತೆ ಮೊಳಗುತ್ತಿದೆ.

ಹೌದು, ಗುಜರಾತಿನ ಸೂರತ್ ನಲ್ಲಿರುವ ಬಟ್ಟೆಗಳಿಗೆ ಹಾಕುವ ಬಣ್ಣ ತಯಾರಿಸುವ ಕಾರ್ಖಾನೆಯಲ್ಲಿ 2016 ರಿಂದಲೂ 2500 ಕ್ಕೂ ಅಧಿಕ ಮಂದಿ ಕಾರ್ಮಿಕರು ಕೆಲಸಕ್ಕೂ ಹಾಜರಾಗುವ ಮುನ್ನ ಶಿಸ್ತಾಗಿ ಸಾಲಿನಲ್ಲಿ ನಿಂತು ರಾಷ್ಟ್ರ ಗೀತೆ ಹಾಡುತ್ತಾರೆ.

ಇದಕ್ಕೂ ಮೊದಲು ಜನವರಿ 26 ಹಾಗೂ ಆಗಸ್ಟ್ 15 ರಂದು ಮಾತ್ರ ರಾಷ್ಟ್ರ ಗೀತೆ ಹಾಡಲಾಗುತ್ತಿತ್ತು. ಈ ಕಾರ್ಖಾನೆಗೆ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಸಿ. ರಜಪೂತ್ ಎಂಬವರು ಭದ್ರತಾ ಅಧಿಕಾರಿಯಾಗಿ ಬಂದ ಬಳಿಕ ಪ್ರತಿನಿತ್ಯ ರಾಷ್ಟ್ರ ಗೀತೆ ಹಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಇದರಿಂದಾಗಿ ಕಾರ್ಮಿಕರಲ್ಲಿ ಜಾತಿ, ಮತದ ಬೇಧವಿಲ್ಲದೆ ಸಹೋದರತ್ವದ ಭಾವ ಮೂಡಿದೆ ಎಂದು ಕಾರ್ಖಾನೆಯ ಮಾಲೀಕ ಸಂಜೀವ್ ಹೇಳಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...