alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತ ವೈಟ್ ಹೌಸ್ ಸ್ನೇಹಿ ಎಂದ ಇವಾಂಕಾ ಟ್ರಂಪ್

ಹೈದರಾಬಾದ್: ಭಾರತ ವೈಟ್ ಹೌಸ್ ಸ್ನೇಹಿ ರಾಷ್ಟ್ರವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆಗಾರ್ತಿ ಮತ್ತು ಅವರ ಪುತ್ರಿಯಾಗಿರುವ ಇವಾಂಕಾ ಟ್ರಂಪ್ ಹೇಳಿದ್ದಾರೆ.

ಹೈದರಾಬಾದ್ ನಲ್ಲಿ ನಡೆಯುತ್ತಿರುವ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಟೀ ಮಾರುತ್ತಿದ್ದ ಬಾಲಕ ಈ ದೇಶದ ಪ್ರಧಾನಿಯಾಗಿದ್ದಾರೆ. ಇದು ಪ್ರಜಾಪ್ರಭುತ್ವದ ಪರಿವರ್ತನೆ ಎಂಬುದನ್ನು ತೋರಿಸಿಕೊಟ್ಟಿದೆ. ಮೋದಿ ಪ್ರಜಾಪ್ರಭುತ್ವದ ಸಂಕೇತವಾಗಿದ್ದಾರೆ ಎಂದು ಕೊಂಡಾಡಿದ್ದಾರೆ.

ಈ ಶೃಂಗಸಭೆ ಭಾರತ ಮತ್ತು ಅಮೆರಿಕ ನಡುವೆ ಆರ್ಥಿಕ ಮತ್ತು ಭದ್ರತೆಯ ಸಹಕಾರದ ಸಂಕೇತವಾಗಿದೆ. ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಅನೇಕ ದೇಶಗಳಲ್ಲಿ ಪುರುಷರು ಬೀದಿಗಳಲ್ಲಿ ನಡೆದಾಡಲು ಕೂಡ ಸಾಧ್ಯವಿಲ್ಲ. ಮಹಿಳಾ ಉದ್ಯಮಿಗಳಿಗೆ ಬಂಡವಾಳ, ಸಂಪರ್ಕ ಮೊದಲಾದ ಅವಕಾಶಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಲ್ಪಿಸಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾನು ಹಲವು ಆಶಯ, ನಿರೀಕ್ಷೆಗಳೊಂದಿಗೆ ಬಂದಿದ್ದೇನೆ. ಹೈದರಾಬಾದ್ ಬಿರಿಯಾನಿ ರುಚಿ ನೋಡ ಬಯಸುತ್ತೇನೆ ಎಂದು ಇವಾಂಕಾ ತಿಳಿಸಿದ್ದಾರೆ.

ಫಲಕನುಮಾ ಅರಮನೆಯಲ್ಲಿ ಇವಾಂಕಾ ನೇತೃತ್ವದ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಔತಣಕೂಟ ಏರ್ಪಡಿಸಿದ್ದಾರೆ. ಏಷ್ಯಾದಲ್ಲಿ 8 ವರ್ಷಗಳ ಬಳಿಕ ಜಾಗತಿಕ ಉದ್ಯಮಶೀಲತಾ ಶೃಂಗಸಭೆ ನಡೆಯುತ್ತಿದೆ. ಈ ಸಭೆ ಜಗತ್ತಿನ ಗಮನಸೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...