alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಸ್ಕೃತ ಪ್ರಬಂಧ ಸ್ಪರ್ಧೆಯಲ್ಲಿ ಮುಸ್ಲಿಂ ವಿದ್ಯಾರ್ಥಿ ಪ್ರಥಮ

ರಾಜಸ್ತಾನದ ಜೈಪುರದಲ್ಲಿ ನಡೆದ ಸಂಸ್ಕೃತ ಸ್ಪರ್ಧೆಯಲ್ಲಿ ಮುಸ್ಲಿಂ ವಿದ್ಯಾರ್ಥಿ ಗೆಲುವು ಸಾಧಿಸಿದ್ದಾನೆ. 16 ವರ್ಷದ ನದೀಮ್ ಖಾನ್ ಗೆ ಸಂಸ್ಕೃತ ಅಚ್ಚುಮೆಚ್ಚಿನ ವಿಷಯ. ಅಕ್ಷಯ ಪಾತ್ರ ಫೌಂಡೇಶನ್ ಆಯೋಜಿಸಿದ್ದ ರಾಜ್ಯಮಟ್ಟದ ಸಂಸ್ಕೃತ ಪ್ರಬಂಧ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ನದೀಮ್, ಮೊದಲ ಸ್ಥಾನ ಪಡೆದಿದ್ದಾನೆ.

2 ಮತ್ತು ನಾಲ್ಕನೇ ತರಗತಿಯ ವಿದ್ಯಾರ್ಥಿಗಳಾದ ಜಹೀನ್ ನಖ್ವಿ ಹಾಗೂ ಜೊರಾಬಿಯಾ ನಗೋರಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿದ್ದಾರೆ. ಎಲ್ಲಾ ಭಾಷೆಗಳಿಗಿಂತ ಸಂಸ್ಕೃತ ಬೆಸ್ಟ್ ಎನ್ನುತ್ತಾನೆ ನದೀಮ್. ಆದ್ರೆ ಸಂಸ್ಕೃತದಲ್ಲಿ ಮಾತನಾಡಲು ಅವಕಾಶವೇ ಸಿಗುವುದಿಲ್ಲ ಅನ್ನೋದು ಅವನ ಬೇಸರ.

ಶಿಕ್ಷಕರು ಕೂಡ ಸಂಸ್ಕೃತ ಬರವಣಿಗೆಗೆ ಹೆಚ್ಚು ಒತ್ತು ಕೊಡ್ತಾರೆ, ಸಂಸ್ಕೃತದಲ್ಲಿ ಚೆನ್ನಾಗಿ ಮಾತನಾಡಲು ಕಲಿಯಬೇಕು ಅನ್ನೋದು ನದೀಮ್ ಆಸೆ. ಭಗವದ್ಗೀತೆ ಮೇಲಿನ ಪ್ರಬಂಧ ಸ್ಪರ್ಧೆಯಲ್ಲಿ ಸುಮಾರು 8000 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...