alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಿತ್ ಶಾರನ್ನು ಕಡೆಗಣಿಸಿ, ಅಡ್ವಾಣಿ ಅವರ ಕುಶಲೋಪರಿ ವಿಚಾರಿಸಿದ ರಾಹುಲ್

ಕಾಂಗ್ರೆಸ್-ಬಿಜೆಪಿ ಜಟಾಪಟಿ ಮುಂದುವರಿದಿದೆ. ಈ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿದ್ದಾರೆ. ಕಲಾಪ ಆರಂಭಕ್ಕೂ 10 ನಿಮಿಷ ಮೊದಲೇ ರಾಹುಲ್ ಲೋಕಸಭೆಗೆ ಆಗಮಿಸಿದ್ದರು.

ಒಂಟಿಯಾಗಿ ಕುಳಿತಿದ್ದ ಎಲ್.ಕೆ. ಅಡ್ವಾಣಿ ಅವರಿಗೆ ಕೈಮುಗಿದು ವಂದಿಸಿದ ರಾಹುಲ್, ಉಭಯ ಕುಶಲೋಪರಿ ವಿಚಾರಿಸಿದ್ರು. ತಾನು ಚೆನ್ನಾಗಿದ್ದೇನೆ ಆದ್ರೆ ಸದನದ ಆರೋಗ್ಯ ಸರಿಯಿಲ್ಲ ಎಂದ್ರು ಅಡ್ವಾಣಿ. ಸುಗಮ ಕಲಾಪಕ್ಕೆ ಅನುವು ಮಾಡಿಕೊಡಲು ಆಡಳಿತ, ವಿಪಕ್ಷ, ಸ್ಪೀಕರ್ ಹಾಗೂ ಪ್ರಧಾನಿ ವಿಫಲರಾಗಿದ್ದಾರೆಂದು ಬೇಸರ ವ್ಯಕ್ತಪಡಿಸಿದ್ರು.

ಅಡ್ವಾಣಿ ಜೊತೆ ಮಾತನಾಡಿದ ರಾಹುಲ್ ನಂತರ ತಮ್ಮ ಸ್ಥಾನಕ್ಕೆ ಮರಳಿದ್ರು. ಇದಾಗಿ ಒಂದು ಗಂಟೆ ಬಳಿಕ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ರಾಹುಲ್ ಗಾಂಧಿ ನಡುವೆ ಮುಜುಗರದ ಸನ್ನಿವೇಶವೊಂದು ನಡೆದಿದೆ. ಮಧ್ಯಾಹ್ನ 12 ಗಂಟೆಗೆ ಸದನ ಮುಂದೂಡಿಕೆಯಾಗಿತ್ತು.

ರಾಹುಲ್ ಗಾಂಧಿ ಸದನದಿಂದ ಹೊರಹೋಗುತ್ತಿದ್ದರು, ಅದೇ ಸಮಯಕ್ಕೆ ಅಮಿತ್ ಶಾ ಒಳಪ್ರವೇಶಿಸಿದ್ದಾರೆ. ಆದ್ರೆ ಉಭಯ ನಾಯಕರು ಔಪಚಾರಿಕತೆಗೂ ಮಾತನಾಡಿಲ್ಲ. ನೋಡಿಯೂ ನೋಡದಂತೆ ಹೊರಟು ಹೋಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...