alex Certify
ಕನ್ನಡ ದುನಿಯಾ       Mobile App
       

Kannada Duniya

400 ವರ್ಷಗಳ ಬಳಿಕ ಈ ದೇವಾಲಯದಲ್ಲಿ ಪುರುಷರಿಗೆ ಸಿಕ್ಕಿದೆ ಪ್ರವೇಶ…!

ಓಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿರುವ ಮಾ ಪಂಚಬರಹಿ ದೇವಾಲಯದೊಳಕ್ಕೆ ಪುರುಷರು ಪ್ರವೇಶಿಸುವಂತಿರಲಿಲ್ಲ. ಕೇವಲ ದಲಿತ ಮಹಿಳೆಯರು ದೇವಸ್ಥಾನದೊಳಗೆ ಬಂದು, ದೇವರ ಮೂರ್ತಿಗಳನ್ನು ಸ್ಪರ್ಷಿಸಬಹುದಿತ್ತು. ಪೂಜೆ ಸಲ್ಲಿಸಲು ಅವಕಾಶವಿತ್ತು.

ಆದ್ರೀಗ 400 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪುರುಷರು ಸಹ ದೇವಾಲಯದೊಳಗೆ ಹೊಕ್ಕು, ಮೂರ್ತಿಗಳನ್ನು ಸ್ಪರ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 20ರಂದು ಐವರು ಪುರುಷರು ದೇವಸ್ಥಾನದ ಒಳಗೆ ಪ್ರವೇಶ ಮಾಡಿದ್ದಾರೆ.

ಈ ದೇವಾಲಯದಲ್ಲಿ ಐವರು ದಲಿತ ಮಹಿಳೆಯರೇ ಅರ್ಚಕರು. ವಿವಾಹಿತ ದಲಿತ ಸ್ತ್ರೀಯರು ಮಾತ್ರ ದೇವಾಲಯವನ್ನು ಶುಚಿಗೊಳಿಸುವ ಕಾರ್ಯ ಮಾಡಬಹುದು. ಬಂಗಾಳ ಕೊಲ್ಲಿಯಲ್ಲಿ ದಿನೇ ದಿನೇ ನೀರಿನ ಮಟ್ಟ ಏರುತ್ತಲೇ ಇರುವುದರಿಂದ ದೇವರ ಮೂರ್ತಿಗಳನ್ನು ಸ್ಥಳಾಂತರಿಸಬೇಕಾದ ಅನಿವಾರ್ಯತೆಯಿತ್ತು.

ಒಂದೊಂದು ಮೂರ್ತಿ 1.5 ಟನ್ ಭಾರವಿದೆ. ಮಹಿಳೆಯರಿಂದ ಇದನ್ನು ಪಕ್ಕಕ್ಕೆ ಸರಿಸಲು ಸಹ ಸಾಧ್ಯವಾಗಿರಲಿಲ್ಲ. ಹಾಗಾಗಿ ಪುರುಷರಿಗೆ ಒಳಪ್ರವೇಶಿಸಲು ಅನುಮತಿ ನೀಡಲಾಯ್ತು. ಮೂರ್ತಿಗಳನ್ನು ಸ್ಥಳಾಂತರ ಮಾಡಿದ ಬಳಿಕ, ದೇವಾಲಯದಲ್ಲಿ ಶುದ್ಧೀಕರಣವನ್ನು ಸಹ ಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...