alex Certify
ಕನ್ನಡ ದುನಿಯಾ       Mobile App
       

Kannada Duniya

CT ಸ್ಕ್ಯಾನ್ ಗೆ ಒಳಗಾಯ್ತು 8 ಅಡಿ ಉದ್ದದ ಹೆಬ್ಬಾವು

ಭುವನೇಶ್ವರ: ಒಡಿಶಾದಲ್ಲಿ ಬರೋಬ್ಬರಿ 8 ಅಡಿ ಉದ್ದದ ಬೃಹತ್ ಹೆಬ್ಬಾವಿಗೆ CT ಸ್ಕ್ಯಾನ್ ಮಾಡಲಾಗಿದೆ. ದೇಶದಲ್ಲಿ ಹೆಬ್ಬಾವಿಗೆ CT ಸ್ಕ್ಯಾನ್ ಮಾಡಿದ ಮೊದಲ ಪ್ರಕರಣ ಇದಾಗಿದೆ.

ಭುವನೇಶ್ವರಿಂದ 130 ಕಿಲೋ ಮೀಟರ್ ದೂರದಲ್ಲಿರುವ ಕಿಯೋಂಜಾರ್ ಆನಂದಪುರದ ದಟ್ಟ ಕಾಡಿನಲ್ಲಿ ಗಾಯಗೊಂಡಿದ್ದ ಹೆಬ್ಬಾವು ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣಿಗೆ ಬಿದ್ದಿದೆ.

ಸ್ನೇಕ್ ಹೆಲ್ಪ್ ಲೈನ್ ಗೆ ಮಾಹಿತಿ ನೀಡಲಾಗಿದ್ದು, ಸ್ವಯಂ ಸೇವಕರು ಆಗಮಿಸಿ ಹೆಬ್ಬಾವನ್ನು ಭುವನೇಶ್ವರದ ಆಸ್ಪತ್ರೆಗೆ ತಂದಿದ್ದಾರೆ.

ಆದರೆ, ಸರ್ಕಾರಿ ಆಸ್ಪತ್ರೆಯಲ್ಲಿ CT ಸ್ಕ್ಯಾನ್ ವ್ಯವಸ್ಥೆ ಇಲ್ಲದ ಕಾರಣ ಮತ್ತು ಹಾವಿಗೆ ಆಗಿರುವ ಗಾಯಗಳ ಮಾಹಿತಿ ಪಡೆಯುವ ಉದ್ದೇಶದಿಂದ ಖಾಸಗಿ ಆಸ್ಪತ್ರೆ ವೈದ್ಯರ ಮನವೊಲಿಸಿ CT ಸ್ಕ್ಯಾನ್ ಮಾಡಲಾಗಿದೆ.

ಗಾಯಗೊಂಡಿದ್ದ ಹಾವಿಗೆ CT ಸ್ಕ್ಯಾನ್ ಸೇರಿ ಹಲವು ಪರೀಕ್ಷೆಗಳನ್ನು ನಡೆಸಿ ಸೂಕ್ತವಾದ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಸ್ನೇಕ್ ಹೆಲ್ಪ್ ಲೈನ್ ನ ಸುಬೆಂದು ಮಲಿಕ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...