alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನವೇ ನೂತನ ಶಾಸಕರ ಡಿಮ್ಯಾಂಡ್

ನಾಗಾಲ್ಯಾಂಡ್ ನಲ್ಲಿ ಹೊಸದಾಗಿ ಆಯ್ಕೆಯಾಗಿರುವ ಎನ್ ಪಿ ಎಫ್ ಶಾಸಕರು ಇನ್ನೂ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸಿಲ್ಲ. ಆದ್ರೆ ಅಷ್ಟರಲ್ಲಾಗ್ಲೇ ಹೊಸ ಹೊಸ ಬೇಡಿಕೆಗಳನ್ನು ಮುಂದಿಡುತ್ತಿದ್ದಾರೆ. ವಿಪಕ್ಷಗಳ 27 ಶಾಸಕರ ಪೈಕಿ 11 ಮಂದಿ, ಆಯುಕ್ತರು ಹಾಗೂ ವಿಧಾನಸಭೆ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ರೆನಾಲ್ಟ್ ಡಸ್ಟರ್ ಬದಲು ತಮಗೆ ಇನ್ನೋವಾ ಕಾರು ಕೊಡಿ ಅತಾ ಕೇಳ್ತಿದ್ದಾರೆ. ಎಲ್ಲಾ ಶಾಸಕರಿಗೂ ಡಸ್ಟರ್ ಕಾರನ್ನು ವಿತರಿಸಲು ನಿರ್ಧರಿಸಲಾಗಿತ್ತು. ಆದ್ರೆ ಡಸ್ಟರ್ ನಲ್ಲಿ ಮೆಂಟೇನೆನ್ಸ್ ಸಮಸ್ಯೆ ಇರೋದ್ರಿಂದ ಆ ಕಾರು ತಮಗೆ ಬೇಡ ಎನ್ನುತ್ತಿದ್ದಾರೆ ಜನಪ್ರತಿನಿಧಿಗಳು.

ಅದರ ಬದಲಾಗಿ ಟೊಯೋಟಾ ಇನ್ನೋವಾ ಕ್ರಿಸ್ಟಾ ಟಾಪ್ ಮಾಡೆಲ್ ಕಾರನ್ನು ನೀಡುವಂತೆ ಕೇಳಿದ್ದಾರೆ. ಡಸ್ಟರ್ ಕಾರಿನ ಬೆಲೆ 13 ಲಕ್ಷ ರೂಪಾಯಿ ಇದ್ದು, ಶಾಸಕರು ಕೇಳ್ತಿರೋ ಇನ್ನೋವಾ ಕಾರಿಗೆ ತಲಾ 22 ಲಕ್ಷ ರೂಪಾಯಿ ವೆಚ್ಚವಾಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...