alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿಗೆ ಮುತ್ತಿಗೆ ಹಾಕಿದ ಪ್ರತಿಭಟನಾಕಾರರು

ಕೊಲೆ ಪ್ರಕರಣವೊಂದರಲ್ಲಿ ಬಂಧನದಲ್ಲಿರುವ ಇಬ್ಬರು ಆರೋಪಿಗಳನ್ನು ತಮ್ಮ‌ ವಶಕ್ಕೆ ಪಡೆಯಬೇಕೆಂಬ‌ ಉದ್ದೇಶದಿಂದ ನಾಗಾಲ್ಯಾಂಡ್ ನ ಕೊಹಿಮಾ‌ ಜಿಲ್ಲಾ ಕಾರಾಗೃಹಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿರುವ ಘಟನೆ ನಡೆದಿದೆ.

ಸೆ.7ರಂದು ಕಾಣೆಯಾಗಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ನೆಫ್ರೆಟೋ ಮೆಟ್ಸಿಯೋ ಅವರು ಸೆ.15 ರಂದು ಫೆಕ್ ಜಿಲ್ಲೆಯ ಅರಣ್ಯದೊಳಗೆ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಬಂಧಿಸಿರುವ ಇಬ್ಬರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ ಬೃಹತ್ ರ್ಯಾಲಿಯೊಂದು ನಾಗಾಲ್ಯಾಂಡ್ ಮುಖ್ಯಮಂತ್ರಿಯವರಿಗೆ ಮನವಿ ಪತ್ರ ಸಲ್ಲಿಸಿತು.

ಮನವಿ ಪತ್ರದ ಬಳಿಕ ವಾಪಾಸಾಗುತ್ತಿದ್ದಾಗ, ಕೊಹಿಮಾ ಜಿಲ್ಲಾ ಕಾರಾಗೃಹದಲ್ಲಿ ಆರೋಪಿಗಳಿದ್ದಾರೆ ಎನ್ನುವ ಶಂಕೆ ಮೇರೆಗೆ ರ್ಯಾಲಿಯ ಗುಂಪೊಂದು ಕಾರಾಗೃಹಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿತು. ಆದರೆ ಇದಕ್ಕೆ ಪೊಲೀಸರು ಹಾಗೂ ಇತರೆ ಪ್ರತಿಭಟನಾಕಾರರು ಅವಕಾಶ ನೀಡಲಿಲ್ಲ. ಗಲಭೆಯಿಂದ ಕಾರಾಗೃಹದ ಮುಂಭಾಗವಿದ್ದ ಸರಕಾರಿ ಕಾರ್ ಹಾಗೂ ಬೈಕ್ ಗಳು ಜಖಂ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ್ದು, ಪೊಲೀಸ್ ಅಧಿಕಾರಿಯ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಇಬ್ಬರು ಆರೋಪಿಗಳು ಸದ್ಯ ಈ ಜೈಲಿನಲ್ಲಿಲ್ಲ. ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...