alex Certify
ಕನ್ನಡ ದುನಿಯಾ       Mobile App
       

Kannada Duniya

ಮುಸ್ಲಿಂ ವ್ಯಕ್ತಿಗೆ ಮನೆ ಮಾರಿದ್ದಕ್ಕೆ ಹಿಂದುಗಳ ಪ್ರತಿಭಟನೆ

ಮೀರತ್ ನ ಮಲಿವಾರಾ ಎಂಬಲ್ಲಿ ಹಿಂದು ಆಭರಣ ವ್ಯಾಪಾರಿಗೆ ಸೇರಿದ ಮನೆಯನ್ನು ಮುಸ್ಲಿಂ ವ್ಯಕ್ತಿ ಖರೀದಿಸಿದ್ದ. ಆದ್ರೆ ಆತನಿಗೆ ಮನೆ ಪ್ರವೇಶಿಸಲು ಅವಕಾಶ ಕೊಡದ ಸ್ಥಳೀಯರು ಪ್ರತಿಭಟನೆ ಕೂಡ ನಡೆಸಿದ್ದಾರೆ. ಹಿಂದುಗಳು ವಾಸವಾಗಿದ್ದ ಹಲವು ಪ್ರದೇಶಗಳು ಸಂಪೂರ್ಣ ಮುಸ್ಲಿಂಮಯವಾಗಿವೆ, ಮಲಿವಾರಾ ಕೂಡ ಹಾಗಾಗಲು ಬಿಡುವುದಿಲ್ಲ ಅನ್ನೋದು ಸ್ಥಳೀಯರ ಹಠ.

ಸಂಜಯ್ ರಸ್ತೋಗಿ ಎಂಬಾತ ತನ್ನ ಮನೆಯನ್ನು 28 ಲಕ್ಷ ರೂಪಾಯಿಗೆ ನೊಮನ್ ಎಂಬಾತನಿಗೆ ಮಾರಾಟ ಮಾಡಿದ್ದ. ಆದ್ರೆ ಇದನ್ನು ಸ್ಥಳೀಯರು ತೀವ್ರವಾಗಿ ವಿರೋಧಿಸಿದ್ದಾರೆ. ಯಾರಾದ್ರೂ ಹಿಂದುಗಳಿಗೇ ಮನೆ ಮಾರಾಟ ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಸ್ಥಳೀಯ ಕಾರ್ಪೊರೇಟರ್ ಸಂದೀಪ್ ಗೋಯಲ್ ಕೂಡ ಈ ಪ್ರತಿಭಟನೆಗೆ ಸಾಥ್ ನೀಡಿದ್ರು. ಕೊನೆಗೆ ವಿವಾದ ಬಗೆಹರಿಸಲು ಪೊಲೀಸರು ಮಧ್ಯ ಪ್ರವೇಶಿಸಬೇಕಾಯ್ತು. ಕೊನೆಗೆ ರಸ್ತೋಗಿ ಹಾಗೂ ನೊಮನ್ ಒಪ್ಪಂದಕ್ಕೆ ಬಂದ್ರು. ಇನ್ನೆರಡು ತಿಂಗಳಲ್ಲಿ ರಸ್ತೋಗಿ ಹಣ ಹಿಂದಿರುಗಿಸಬೇಕು, ಅಲ್ಲಿಯವರೆಗೂ ಮನೆಯನ್ನು ಪ್ರವೇಶಿಸದಿರಲು ನೊಮನ್ ಒಪ್ಪಿಕೊಂಡ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...