alex Certify
ಕನ್ನಡ ದುನಿಯಾ       Mobile App
       

Kannada Duniya

ಪರಿಸರ ಮಾಲಿನ್ಯ ತಡೆಯಲು ಮೀರತ್ ನಲ್ಲಿ ಮಹಾಯಾಗ

ಉತ್ತರ ಪ್ರದೇಶದ ಮೀರತ್ ನಲ್ಲಿ ವಾಯುಮಾಲಿನ್ಯ ನಿಯಂತ್ರಣಕ್ಕಾಗಿ ಮಹಾಯಾಗ ಏರ್ಪಡಿಸಲಾಗಿದೆ. ಭೈನ್ಸಲಿ ಮೈದಾನದಲ್ಲಿ 9 ದಿನಗಳ ಕಾಲ ಶ್ರೀ ಆಯುಚಂಡಿ ಮಹಾಯಜ್ಞ ಸಮಿತಿ ಯಾಗ ಹಮ್ಮಿಕೊಂಡಿದೆ. ನವರಾತ್ರಿ ಹಿನ್ನೆಲೆಯಲ್ಲಿ ಈ ಯಾಗದಲ್ಲಿ 500 ಕ್ವಿಂಟಾಲ್ ಮಾವಿನ ಕಟ್ಟಿಗೆಯನ್ನು ಸುಡಲಾಗುತ್ತದೆ.

ಈ ಹವನ ಗಾಳಿಯನ್ನು ಶುದ್ಧೀಕರಿಸುತ್ತಿದೆ, ಹಾಗಾಗಿ ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಎನ್ನುವ ನಂಬಿಕೆ ಇದೆ. ಓಜೋನ್ ಪದರ ಸಂರಕ್ಷಣೆ, ಪರಿಸರ ರಕ್ಷಣೆ ಮತ್ತು ಮಾನವೀಯತೆಗೆ ಇದೊಂದು ಕೊಡುಗೆ ಅಂತಾ ಸಮಿತಿಯ ಉಪಾಧ್ಯಕ್ಷ ಗಿರೀಶ್ ಬನ್ಸಲ್ ಹೇಳಿದ್ದಾರೆ.

ಮಹಾಯಾಗಕ್ಕಾಗಿ 108 ಹವನ ಕುಂಡಗಳನ್ನು ನಿರ್ಮಾಣ ಮಾಡಲಾಗಿದೆ. ಮಾರ್ಚ್ 26ರವರೆಗೆ ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ ಸಂಜೆ 7ರವರೆಗೆ ಯಜ್ಞ ನಡೆಯಲಿದೆ. ಮಹಾಯಾಗಕ್ಕಾಗಿ ವಾರಣಾಸಿ ಹಾಗೂ ಬೃಂದಾವನದಿಂದ ಅರ್ಚಕರು ಆಗಮಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...