alex Certify
ಕನ್ನಡ ದುನಿಯಾ       Mobile App
       

Kannada Duniya

ಎಂತವರ ಮನವನ್ನೂ ಕಲಕುವಂತಿದೆ ಈ ಘಟನೆ

mp human

ಆಸ್ಪತ್ರೆಯಲ್ಲಿ ಮೃತಪಟ್ಟ ಪತ್ನಿಯನ್ನು ಹೆಗಲ ಮೇಲೆ ಹೊತ್ತುಕೊಂಡೇ ಗ್ರಾಮಕ್ಕೆ ಹೊರಟಿದ್ದ ಒಡಿಶಾದ ಮಾಂಝಿ ಪ್ರಕರಣ ಹಸಿರಾಗಿರುವಾಗಲೇ ಮಧ್ಯಪ್ರದೇಶದಲ್ಲೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಬಾಣಂತಿ ಅನಾರೋಗ್ಯದಿಂದ ಮೃತಪಟ್ಟಿದ್ದರೂ ಕರುಣೆ ತೋರದ ಕಂಡಕ್ಟರ್, ಹಸುಗೂಸು ಹಾಗೂ ಪತಿಯನ್ನು ದಾರಿ ಮಧ್ಯದಲ್ಲೇ ಇಳಿಸಿ ಹೋದ ಘಟನೆ ದಮೊಹ್ ಜಿಲ್ಲೆಯಲ್ಲಿ ನಡೆದಿದೆ. ರಾಮ್ ಸಿಂಗ್ ಪತ್ನಿ 5 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆಕೆಗೆ ಆರೋಗ್ಯ ಸರಿ ಇಲ್ಲದ ಕಾರಣ ಬಸ್ ನಲ್ಲಿ ಪಟ್ಟಣದ ಆಸ್ಪತ್ರೆಗೆ ಬಸ್ ನಲ್ಲಿ ಹೊರಟಿದ್ದಾರೆ. ಬಸ್ ನಲ್ಲೇ ಮಹಿಳೆ ಮೃತಪಟ್ಟಿದ್ದು, ಬೇರೆ ಪ್ರಯಾಣಿಕರು ಆಕ್ಷೇಪಿಸಿದ್ದಾರೆ ಎಂದು ಕಂಡಕ್ಟರ್ ಕೆಳಗೆ ಇಳಿಸಿದ್ದಾನೆ.

ಕಾಡಿನ ದಾರಿಯಲ್ಲೇ ಮೃತ ಪತ್ನಿ ಹಾಗೂ ಚಿಕ್ಕ ಮಗುವಿನೊಂದಿಗೆ ಕೆಳಗೆ ಇಳಿದ ರಾಮ್ ಸಿಂಗ್ ದಿಕ್ಕು ತೋಚದೇ ಅಲ್ಲೇ ನಿಂತಿದ್ದಾನೆ. ಸುರಿಯುವ ಮಳೆಯಲ್ಲೇ ಹಸಿವಿನಿಂದ ನರಳುತ್ತಿದ್ದ ಮಗುವಿಗೆ ಸಮಾಧಾನಪಡಿಸುತ್ತಾ, ಮಳೆಯಲ್ಲಿ ನೆನೆಯುತ್ತಿದ್ದ ಪತ್ನಿಯ ಶವ ನೋಡುತ್ತಾ ಕಣ್ಣೀರು ಹಾಕಿದ್ದಾನೆ.

ಇದೇ ದಾರಿಯಲ್ಲಿ ಬಂದ ಇಬ್ಬರು ವಕೀಲರು, ಇದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಸ್ಪಂದಿಸಿಲ್ಲ.  ಕೊನೆಗೆ ವಕೀಲರು ಅಂಬುಲೆನ್ಸ್ ಕರೆಸಿ, ಅವರನ್ನು ಮನೆಗೆ ಕಳುಹಿಸಿದ್ದಾರೆ. ಬೇರೆ ಪ್ರಯಾಣಿಕರು ಆಕ್ಷೇಪಿಸಿದ್ದರಿಂದ ಅವರನ್ನು ಬಸ್ ನಿಂದ ಕೆಳಗೆ ಇಳಿಸಿದ್ದಾಗಿ ಕಂಡಕ್ಟರ್ ಹೇಳಿದ್ದಾನೆ. ಈ ಅಮಾನವೀಯ ಘಟನೆಯೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...