alex Certify
ಕನ್ನಡ ದುನಿಯಾ       Mobile App
       

Kannada Duniya

ದೇಹದಿಂದ ಹೊರಗೆ ಮಿಡಿಯುತ್ತಿದೆ ಈ ನವಜಾತ ಶಿಶುವಿನ ಹೃದಯ

in-madhya-pradesh-baby-born-with-heart-outside-her-body-battles-for-lifeಮಧ್ಯ ಪ್ರದೇಶದ ಬುಂದೇಲ್ಖಂಡ್ ನ ಛತ್ರಾಪುರ್ ಜಿಲ್ಲೆಯಲ್ಲಿ ಜನಿಸಿರುವ ನವಜಾತ ಹೆಣ್ಣು ಶಿಶುವಿನ ಹೃದಯ ದೇಹದಿಂದ ಹೊರಗಿದ್ದು, ಈ ಶಿಶುವಿನ ಪ್ರಾಣ ಉಳಿಸಿಕೊಳ್ಳಲು ಪೋಷಕರು ಪರದಾಡುತ್ತಿದ್ದಾರೆ. ವಿಶ್ವ ಪ್ರಸಿದ್ದ ಖಜರಾಹೋ ದೇವಾಲಯದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿರುವ ಅರವಿಂದ್ ಪಟೇಲ್ ಎಂಬಾತನ ಪತ್ನಿ ಈ ಮಗುವಿಗೆ ಜನ್ಮ ನೀಡಿದ್ದಾರೆ.

ಏಪ್ರಿಲ್ 5 ರಂದು ಮಧ್ಯಾಹ್ನ 3-30 ರ ಸುಮಾರಿಗೆ ಖಜರಾಹೋ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿದ್ದ ಅರವಿಂದ್ ಪಟೇಲ್ ರ ಪತ್ನಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಹೃದಯ ದೇಹದಿಂದ ಹೊರಗಿರುವುದನ್ನು ಕಂಡು ವೈದ್ಯರು ಅವಕ್ಕಾಗಿದ್ದಾರೆ. ತಮ್ಮಲ್ಲಿ ಸೂಕ್ತ ಸೌಲಭ್ಯಗಳಿಲ್ಲದ ಕಾರಣ ಕೂಡಲೇ ಛತ್ರಾಪುರ್ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದಾರೆ.

ಆದರೆ ಅಲ್ಲಿಯೂ ಸೂಕ್ತ ವೈದ್ಯಕೀಯ ನೆರವು ದೊರೆಯದ ಕಾರಣ ಶಿಶುವನ್ನು ಈಗ ಗ್ವಾಲಿಯಾರ್ ನ ಗಜರಾಜ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಚಿಕಿತ್ಸೆಗೆ 25 ರಿಂದ 30 ಲಕ್ಷ ರೂ. ವೆಚ್ಚವಾಗುತ್ತದೆಂದು ಹೇಳಲಾಗಿದ್ದು, ಕಡುಕಷ್ಟದಲ್ಲಿರುವ ಅರವಿಂದ್ ಪಟೇಲ್, ಈಗ ಛತ್ರಾಪುರ್ ಜಿಲ್ಲಾಡಳಿತದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...