alex Certify
ಕನ್ನಡ ದುನಿಯಾ       Mobile App
       

Kannada Duniya

ಅಡಕತ್ತರಿಯಲ್ಲಿ ವಯಸ್ಕರ ಚಿತ್ರ ಪ್ರದರ್ಶಿಸುವ ಚಿತ್ರಮಂದಿರಗಳು

adult

ಥಿಯೇಟರ್ ಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಹಾಡುವುದು ಕಡ್ಡಾಯ ಅಂತಾ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಆದ್ರೆ ಈ ಆದೇಶದಿಂದ ಕೋಲ್ಕತ್ತಾದ ವಯಸ್ಕರ ಸಿನಿಮಾ ಪ್ರದರ್ಶಿಸುವ ಥಿಯೇಟರ್ ಗಳು ಅಡಕತ್ತರಿಯಲ್ಲಿ ಸಿಲುಕಿಕೊಂಡಿವೆ.

ಯಾಕಂದ್ರೆ ಅಡಲ್ಟ್ ಫಿಲ್ಮ್ ನೋಡಲು ಬಂದವರು ರಾಷ್ಟ್ರಗೀತೆ ಪ್ರಸಾರವಾಗುವಾಗ ಎದ್ದು ನಿಂತು ಗೌರವ ಸೂಚಿಸುತ್ತಿಲ್ಲ.  ಇವರೆಲ್ಲರೂ ವಯಸ್ಕರು ಸಿನಿಮಾ ವೀಕ್ಷಣೆಗೆ ಬರ್ತಾರೆ, ಹೀಗೆ ಬಂದವರು ರಾಷ್ಟ್ರಗೀತೆಗೆ ಗೌರವ ಸೂಚಿಸ್ತಾರೆ ಅಂತಾ ನಿರೀಕ್ಷಿಸೋದು ಕೂಡ ಕಷ್ಟ ಎನ್ನುತ್ತಾರೆ ಥಿಯೇಟರ್ ಸಿಬ್ಬಂದಿ. ಜೊತೆಗೆ ಇಂತಹ ಚಿತ್ರ ಪ್ರದರ್ಶಿಸುವಾಗ ರಾಷ್ಟ್ರಗೀತೆ ಪ್ರಸಾರ ಮಾಡುವುದಕ್ಕೂ ಇವರುಗಳಿಗೆ ಮುಜುಗರ.

ಕೆಲವು ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರದ ವೇಳೆ ಎಲ್ಲರೂ ಎದ್ದು ನಿಂತಿದ್ದಾರೋ ಇಲ್ಲವೋ ಅನ್ನೋದನ್ನು ಪರಿಶೀಲಿಸಲು ಸಾಕಷ್ಟು ಸಿಬ್ಬಂದಿ ಇಲ್ಲ. ಎದ್ದು ನಿಲ್ಲುವಂತೆ ಸೂಚಿಸಿದ್ರೆ ಕೆಲ ಪ್ರೇಕ್ಷಕರು ಜಗಳಕ್ಕಿಳಿಯುತ್ತಾರೆ, ಹಾಗಾಗಿ ಪೊಲೀಸರ ಸಹಾಯ ಪಡೆಯಬೇಕಾಗಿ ಬರಬಹುದು ಎನ್ನುತ್ತಾರೆ ಥಿಯೇಟರ್ ಮಾಲೀಕರು.

ಮೊದಲೆಲ್ಲ ಸಿನಿಮಾ ಮುಗಿದ ಮೇಲೆ ರಾಷ್ಟ್ರಗೀತೆ ಪ್ರಸಾರ ಮಾಡಲಾಗ್ತಾ ಇತ್ತು, ಆದ್ರೆ ಎದ್ದು ನಿಂತು ಗೌರವ ಸೂಚಿಸಬೇಕೆಂಬ ಕನಿಷ್ಟ ಪ್ರಜ್ಞೆಯೂ ಇಲ್ಲದ ಪ್ರೇಕ್ಷಕರು ಥಿಯೇಟರ್  ನಿಂದ ಹೊರನಡೆದುಬಿಡುತ್ತಿದ್ರು. ದೇಶದ ಬಗ್ಗೆ ಗೌರವವಿದೆ, ಆದ್ರೆ ವಯಸ್ಕರ ಸಿನಿಮಾವನ್ನು ನೋಡುವ ಉದ್ದೇಶವೇ ಬೇರೆ, ದೇಶಾಭಿಮಾನ ತೋರಿಸುವಂತೆ ಯಾರೂ ಒತ್ತಡ ಹೇರಬಾರದು ಎನ್ನುತ್ತಾರೆ ಕೆಲ ಪ್ರೇಕ್ಷಕರು. ಅದೇನೇ ಆದ್ರೂ ರಾಷ್ಟ್ರಗೀತೆಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...