alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಪುಟ್ಟ ಮಗುವನ್ನು ಯೋಧರು ರಕ್ಷಿಸಿದ ವಿಡಿಯೋ

ಕೇರಳದ ಪ್ರವಾಹ ಪೀಡಿತ ಪ್ರದೇಶದಲ್ಲಿ ಸಿಲುಕಿದ್ದ ಮಗುವೊಂದನ್ನು ವಾಯುಸೇನೆ ರಕ್ಷಿಸಿದೆ. ಮನೆಯ ಟೆರೇಸ್‌ನಲ್ಲಿದ್ದ ಮಗುವನ್ನು ಕಂಡ ಹೆಲಿಕಾಪ್ಟರ್‌ ನಲ್ಲಿದ್ದ ಸಿಬ್ಬಂದಿ, ಯೋಧನೋರ್ವನನ್ನು ಹಗ್ಗದ ಮೂಲಕ ಕೆಳಗಿಳಿಸಿ, ಮಗುವನ್ನು ಸುರಕ್ಷಿತವಾಗಿ ಹೆಲಿಕಾಪ್ಟರ್‌ಗೆ ರವಾನಿಸಲಾಗಿದೆ. ಈ ವಿಡಿಯೋ ಇದೀಗ ವೈರಲ್‌ ಆಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಮಗು ಇದ್ದ ಮನೆಯಲ್ಲಿ ಅರ್ಧದಷ್ಟು ನೀರು ತುಂಬಿಕೊಂಡಿತ್ತು. ಆ ಭಾಗದಲ್ಲಿದ್ದ ಬೋಟುಗಳು ಮಗುವನ್ನು ರಕ್ಷಿಸುವುದು ಅಸಾಧ್ಯ ಎಂದಾಗ, ಹೆಲಿಕಾಪ್ಟರ್‌ ಸಹಾಯದಿಂದ ಮಗುವನ್ನು ರಕ್ಷಿಸಲಾಗಿದೆ. ಇದೇ ಹೆಲಿಕಾಪ್ಟರ್‌ನಲ್ಲಿ ಮಗುವಿನ ತಾಯಿಯನ್ನೂ ರಕ್ಷಿಸಲಾಗಿದೆ. ವಾಯುಸೇನೆಯ ಗಾರ್ಡ್‌ ಸ್ಪೆಷಲ್‌ ಫೋರ್ಸ್‌ನ ಕಮಾಂಡರ್‌ ಪ್ರಶಾಂತ್‌ ಮಗುವನ್ನು ಹಿಡಿದು ಹೆಲಿಕಾಪ್ಟರ್‌ಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಗಲಿರುಳು ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 90 ಹೆಲಿಕಾಪ್ಟರ್‌, 500ಕ್ಕೂ ಅಧಿಕ ಬೋಟ್‌ಗಳು ಕಾರ್ಯಾಚರಣೆಯಲ್ಲಿ ತೊಡಗಿವೆ. ವೈದ್ಯಕೀಯ ಸಾಮಾಗ್ರಿಗಳು, ಲೈಫ್‌ ಜ್ಯಾಕೆಟ್‌ಗಳು, ಅಗತ್ಯ ವಸ್ತುಗಳನ್ನು ಸಂತ್ರಸ್ತರಿಗೆ ರವಾನಿಸಲಾಗುತ್ತಿದೆ. ಭೂ ಕುಸಿತ ಹಾಗೂ ನಿರಂತರ ಮಳೆಯ ನಡುವೆಯೂ ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...