alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಗಾಗಿ ಐರ್ಲೆಂಡ್ ಪ್ರಜೆಯ ಹುಡುಕಾಟ

42 ವರ್ಷದ ಆ್ಯಂಡ್ರೂ ಜೋರ್ಡನ್ ಐರ್ಲೆಂಡ್ ಮೂಲದವನು. ಈತನ ಪತ್ನಿ ಲಿಗಾ ಕ್ರೊಮನೆ ಜೊತೆಗೆ ಕೇರಳದ ಕೋವಲಂಗೆ ಬಂದಿದ್ಲು. ಖಿನ್ನತೆಯಿಂದ ಬಳಲುತ್ತಿದ್ದ ಲಿಗಾ ಚಿಕಿತ್ಸೆಗಾಗಿ ಫೆಬ್ರವರಿ 21ರಂದು, ಸಹೋದರಿ ಇಲ್ಜೆ ಜೊತೆಯಲ್ಲಿ ಕೇರಳಕ್ಕೆ ಬಂದಿದ್ದಾಳೆ.

ಆದ್ರೆ ಲಿಗಾ ನಾಪತ್ತೆಯಾಗಿದ್ದು, ಅವಳನ್ನು ಹುಡುಕಿಕೊಂಡು ಪತಿ ಆ್ಯಂಡ್ರೂ ಬೀದಿ ಬೀದಿ ಅಲೆಯುತ್ತಿದ್ದಾನೆ. ಮಾರ್ಚ್ 14ರಂದು ಲಿಗಾ ಸಹೋದರಿಗೂ ತಿಳಿಸದೇ ಕೋವಲಂ ಬೀಚ್ ಗೆ ತೆರಳಿದ್ದಾಳಂತೆ. ಅಲ್ಲಿಂದ ವಾಪಸ್ ಬಂದಿಲ್ಲ.

ಮಾರ್ಚ್ 18ರಂದು ಲಿಗಾಳನ್ನು ನೋಡಿರೋದಾಗಿ ಕೆಲ ಸ್ಥಳೀಯರು ಹೇಳುತ್ತಿದ್ದಾರೆ. ಪೊಲೀಸರು 2 ದಿನಗಳಲ್ಲಿ ಮಹಿಳೆಯನ್ನು ಪತ್ತೆ ಮಾಡುವುದಾಗಿ ಹೇಳಿದ್ದರು. ಆದ್ರೆ 9 ದಿನಗಳೇ ಕಳೆದ್ರೂ ಅವಳ ಸುಳಿವೇ ಸಿಕ್ಕಿಲ್ಲ.

ಲಿಗಾ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಆ್ಯಂಡ್ರೂ ಪ್ರಕಟಿಸಿದ್ದಾನೆ. ಆಕೆ ಸುಶಿಕ್ಷಿತೆ, ವಿವಿಧ ದೇಶಗಳಿಗೆ ಪ್ರಯಾಣ ಮಾಡಿದ ಅನುಭವ ಅವಳಿಗಿದೆ. ಹಾಗಾಗಿ ದಾರಿ ತಪ್ಪಿ ಎಲ್ಲೇ ಹೋಗಿದ್ದರೂ ವಾಪಸ್ ಬರುತ್ತಿದ್ದಳು.

ಆಕೆಯನ್ನು ಯಾರಾದ್ರೂ ಅಪಹರಣ ಮಾಡಿರಬಹುದು ಅನ್ನೋದು ಆ್ಯಂಡ್ರೂ ಅನುಮಾನ. ಆಕೆಯ ಸಹೋದರಿ ಟ್ವಿಟ್ಟರ್ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರ ನೆರವನ್ನೂ ಕೋರಿದ್ದಾಳೆ.

ಈ ಮಧ್ಯೆ ವಿದೇಶಿ ಮಹಿಳೆಯೊಬ್ಬಳ ಶವ ಪತ್ತೆಯಾಗಿದ್ದು, ಡಿ ಎನ್ ಎ ಪರೀಕ್ಷೆ ಬಾಕಿ ಇದೆ. ಆದ್ರೆ ಆ ಮೃತದೇಹ ಲಿಗಾಳದ್ದಲ್ಲ ಅಂತಾ ಸಹೋದರಿ ಸ್ಪಷ್ಟಪಡಿಸಿದ್ದಾಳೆ. ಯಾಕಂದ್ರೆ ಲಿಗಾ ಟ್ಯಾಟೂ ಹಾಕಿಸಿಕೊಂಡಿರಲಿಲ್ಲ, ಈಗ ಸಿಕ್ಕಿರುವ ಶವದ ಕೈ ಮೇಲೆ ಟ್ಯಾಟೂ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...