alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಳಿಂಗ ಸರ್ಪದ ಮೊಟ್ಟೆಗಳನ್ನು 100 ದಿನ ಕಾಪಾಡಿದ್ದಾರೆ ಮೂವರು

king-cobra-4-650_650x400_61501735846

ಕೇರಳದ ಕಣ್ಣೂರಿನಲ್ಲಿ ಕಾಳಿಂಗ ಸರ್ಪದ ಮೊಟ್ಟೆಗಳನ್ನು ಮೂವರು ಪ್ರಾಣಿಪ್ರಿಯರು 100 ದಿನಗಳ ಕಾಲ ಜೋಪಾನ ಮಾಡಿದ್ದಾರೆ. ಮೊಟ್ಟೆ ಒಡೆದು ಮರಿ ಹೊರಬರುವವರೆಗೂ ಅವುಗಳಿಗೆ ಅಪಾಯವಾಗದಂತೆ ಕಾಯ್ದುಕೊಂಡಿದ್ದಾರೆ.

ಮೇ ತಿಂಗಳಿನಲ್ಲಿ ಕಾಳಿಂಗ ಸರ್ಪ ಮೊಟ್ಟೆಗಳನ್ನಿಟ್ಟಿತ್ತು. ಕೊಟ್ಟಿಯೂರ್ ಎಂಬಲ್ಲಿ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿದೆ ಅಂತಾ ಸ್ಥಳೀಯರು ಅರಣ್ಯ ಇಲಾಖೆಯ ಸಿಬ್ಬಂದಿ ಚಂದ್ರನ್ ಅವರಿಗೆ ಕರೆ ಮಾಡಿದ್ದರು. ಗ್ರಾಮಕ್ಕೆ ಬಂದ ವಿಜಯ್ ನೀಲಕಂಠನ್, ಚಂದ್ರನ್ ಹಾಗೂ ಗೌರಿ ಶಂಕರ್ ಪೊಟರೆಯೊಂದರಲ್ಲಿದ್ದ ಕಾಳಿಂಗ ಸರ್ಪದ ಮೊಟ್ಟೆಗಳನ್ನು ಗಮನಿಸಿದ್ರು.

king-cobra-5-650_650x400_61501736027king-cobra-2-650_650x400_41501736005ಮೊಟ್ಟೆಗಳನ್ನು ಯಾರೂ ನಾಶ ಮಾಡದಂತೆ ಕಾಯ್ದುಕೊಳ್ಳುವುದು ಬಹುದೊಡ್ಡ ಸವಾಲಾಗಿತ್ತು. ಅವು ಮರಿಯಾದ್ಮೇಲೆ ಅಪಾಯವಾಗಬಹುದು ಅನ್ನೋ ಆತಂಕ ಗ್ರಾಮಸ್ಥರಿಗೆ. ಹಾವುಗಳನ್ನು ಯಾವ ರೀತಿ ನಿಯಂತ್ರಿಸಬೇಕು ಎಂಬ ಬಗ್ಗೆ ಗ್ರಾಮಸ್ಥರಿಗೆ ತರಬೇತಿ ನೀಡಿದ ಈ ಮೂವರು, ಮೊಟ್ಟೆಗಳನ್ನು ನಾಶ ಮಾಡದಂತೆ ಮನವೊಲಿಸಿದ್ರು.

king-cobra-10-650_650x400_41501736305

ಕಾಳಿಂಗ ಸರ್ಪದ ಮೊಟ್ಟೆ ಮರಿಯಾಗಲು 80-105 ದಿನಗಳು ಬೇಕು. ಈ ಮೂವರು ಮೊಟ್ಟೆಯಿದ್ದ ಗ್ರಾಮದಿಂದ 90 ಕಿಮೀ ದೂರದ ನಿವಾಸಿಗಳು. ಆದ್ರೂ ಎರಡು ದಿನಕ್ಕೊಮ್ಮೆ ಬಂದು ಮೊಟ್ಟೆಯನ್ನು ಪರಿಶೀಲಿಸುತ್ತಿದ್ರು. 100 ದಿನಗಳ ನಂತರ ಮೊಟ್ಟೆಯೆಲ್ಲ ಒಡೆದು ಮರಿಗಳು ಹೊರಬಿದ್ದಿವೆ. ಕಾಳಿಂಗ ಸರ್ಪದ ಮರಿಗಳನ್ನೆಲ್ಲ ಕೊಂಡೊಯ್ದು ದಟ್ಟ ಕಾಡಿನಲ್ಲಿ ಬಿಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...