alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಗ್ರಾಮದ ಪುರುಷರಿಗಿದ್ದಾರೆ ಇಬ್ಬರು ಪತ್ನಿಯರು…!

ರಾಜಸ್ತಾದ ಜೈಸಲ್ಮೇರ್ ನಲ್ಲಿರುವ ರಾಮ್ದಿಯೋ-ಕಿ-ಬಸ್ತಿ ಒಂದು ಪುಟ್ಟ ಗ್ರಾಮ. 2011ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ಬರೀ 946. ಈ ಗ್ರಾಮದ ವಿಶೇಷ ಅಂದ್ರೆ, ಇಲ್ಲಿನ ಹಲವಾರು ಪುರುಷರು ಇಬ್ಬರು ಪತ್ನಿಯರನ್ನು ಹೊಂದಿದ್ದಾರೆ. ಸಂಪ್ರದಾಯದ ಪ್ರಕಾರವಾಗಿಯೇ ಈ ಹಳ್ಳಿಯ ಗಂಡಸರು ಎರಡು ಬಾರಿ ವಿವಾಹವಾಗಿದ್ದಾರೆ. ಹಾಗೆಯೇ ಇಬ್ಬರು ಹೆಂಡತಿಯರ ಜೊತೆಗೆ ಒಟ್ಟಿಗೆ ವಾಸವಿದ್ದಾರೆ ಅನ್ನೋದು ಮತ್ತೊಂದು ವಿಶೇಷ.

ಅಷ್ಟಕ್ಕೂ ಈ ಗ್ರಾಮದಲ್ಲಿ ಎರಡೆರಡು ಮದುವೆ ನಡೆಯಲು ಕಾರಣವೇನು ಗೊತ್ತಾ..? ಇಲ್ಲಿ ಕೆಲ ಮಹಿಳೆಯರು ಹೆಣ್ಣು ಮಕ್ಕಳನ್ನೇ ಹೆತ್ತರೆ, ಮತ್ತೆ ಕೆಲವರಿಗೆ ಸಂತಾನ ಫಲ ಸಿಕ್ಕಿಲ್ಲ. ಹೀಗಾಗಿ ಗ್ರಾಮದ ಪುರುಷರು ಎರಡನೇ ಬಾರಿ ಹೆಣ್ಣು ಹುಡುಕುವಾಗ ತುಂಬಾ ಆಯ್ಕೆ ಮಾಡಿ ಮದುವೆಯಾಗ್ತಿದ್ರು. ಹಾಗೆಯೇ ಎರಡನೇ ಹೆಂಡತಿ ಖಂಡಿತವಾಗಿಯೂ ಗಂಡು ಮಗುವನ್ನು ಕೊಟ್ಟೆ ಕೊಡುತ್ತಾಳೆ ಎಂಬ ನಂಬಿಕೆ ಅವರಲ್ಲಿತ್ತು. ಆದ್ರೆ ಈ ಆಚರಣೆ ಹಳೆಯ ತಲೆಮಾರಿಗೆ ನಿಂತಿದೆ. ಇತ್ತೀಚಿನ ಪೀಳಿಗೆ ಇಲ್ಲಿ ಎರಡು ಮದುವೆಯಾಗಿಲ್ಲ.

ಈ ಊರಲ್ಲಿ ಎರಡನೇ ಮದುವೆಯಾದ ಎಷ್ಟೋ ಪುರುಷರಿದ್ದಾರೆ. ಹಾಗಂತ ಎರಡೆರಡು ಮನೆ ಮಾಡಿ, ಎರೆಡೆರಡು ಒಲೆ ಉರಿಸಿಲ್ಲ. ಒಂದೇ ಮನೆಯಲ್ಲಿ ಇಬ್ಬರು ಹೆಂಡತಿಯರು ಒಟ್ಟಾಗಿ ಇರುತ್ತಿದ್ದಾರೆ. ಪುರುಷರು ಕೂಡಾ ತಮ್ಮ ಪತ್ನಿಯರನ್ನು ಪ್ರೀತಿಯಿಂದ ನೋಡಿಕೊಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...