alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದಲ್ಲಿ ಪೋಕೆಮಾನ್ ಗೋ ನಿಂದ ಆಯ್ತು ಮೊದಲ ಅಪಘಾತ

pokeman

ಮುಂಬೈ: ಈಗಾಗಲೇ ವಿಶ್ವದ ಅನೇಕ ದೇಶಗಳಲ್ಲಿ ಅವಾಂತರಗಳಿಗೆ ಕಾರಣವಾಗಿರುವ ಪೋಕೆಮಾನ್ ಗೋ ಆಟದಿಂದ ಭಾರತದಲ್ಲಿ ಮೊದಲ ಅಪಘಾತ ಸಂಭವಿಸಿದೆ. ಆಟವಾಡುತ್ತಾ ಕಾರು ಚಾಲನೆ ಮಾಡಿದ್ದರಿಂದ ಈ ಘಟನೆ ನಡೆದಿದೆ.

ಜಪಾನ್ ನಲ್ಲಿ ಪೋಕೆ ಮಾನ್ ಬಿಡುಗಡೆಯಾದ 3 ದಿನದಲ್ಲೇ 36 ಅಪಘಾತ ಪ್ರಕರಣ ನಡೆದಿವೆ. ಇದರ ಮೇಲೆಯೇ ಗಮನ ಕೇಂದ್ರೀಕರಿಸುವುದರಿಂದ ಅನೇಕ ಅವಘಡ ಸಂಭವಿಸುತ್ತವೆ. ಭಾರತದಲ್ಲಿ ಪೋಕೆಮಾನ್ ಇನ್ನೂ ರಿಲೀಸ್ ಆಗಿಲ್ಲವಾದರೂ, ಇಂಟರ್ ನೆಟ್ ಮೂಲಗಳಿಂದ ಸುಲಭವಾಗಿ ಸಿಗುತ್ತದೆ. ಇದನ್ನೇ ಡೌನ್ ಲೋಡ್ ಮಾಡಿಕೊಂಡು ಆಟವಾಡಲಾಗುತ್ತಿದೆ. ಮುಂಬೈ ಬಾಂದ್ರಾ ನಿವಾಸಿ 26 ವರ್ಷದ ಜಬ್ಬೀರ್ ಆಲಿ ಎಂಬಾತ ಪೋಕೆಮಾನ್ ಆಟವಾಡುತ್ತಾ ಕಾರ್ ಚಾಲನೆ ಮಾಡಿದ್ದು, ನಿಯಂತ್ರಣ ತಪ್ಪಿ ಅಪಘಾತಕ್ಕೆ ಈಡಾಗಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಬ್ಬೀರ್ ಆಲಿ ಅಪಘಾತಕ್ಕೀಡಾದ ತಮ್ಮ ಕಾರಿನ ಚಿತ್ರವನ್ನು ಪೋಸ್ಟ್ ಮಾಡಿದ್ದು, ಪೋಕೆಮಾನ್ ಆಡುವಾಗ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...