alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಾಧಿಕಾರಿ ಮುಂದೆ ಖೈದಿಗಳಿಡುತ್ತಿದ್ದಾರೆ ಇಂತ ಪ್ರಶ್ನೆ

ದೇಶದ ಅತಿ ದೊಡ್ಡದಾದ ತಿಹಾರ್ ಜೈಲಿನಲ್ಲಿರುವ ಖೈದಿಗಳು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುತ್ತಿರುವ ಪ್ರಶ್ನೆಗಳು ಜೈಲಾಧಿಕಾರಿಗಳನ್ನು ಕಂಗೆಡಿಸಿದೆ. ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದಿದ್ದರೆ ನೇರವಾಗಿ ಮಾಹಿತಿ ಹಕ್ಕು ಆಯೋಗಕ್ಕೆ ಖೈದಿಗಳು ದೂರು ನೀಡುತ್ತಿದ್ದಾರೆ. ಅಷ್ಟಕ್ಕೂ ಖೈದಿಗಳು ಕೇಳುತ್ತಿರುವ ಪ್ರಶ್ನೆಗಳಾದರೂ ಎಂತಹುದು ಗೊತ್ತಾ?.

ಖೈದಿಯೊಬ್ಬ ತನ್ನ ಬಿಡುಗಡೆ ಯಾವಾಗ ಎಂದು ಕೇಳಿದ್ದರೆ, ಮತ್ತೊಬ್ಬ ಈ ಋತುವಿನಲ್ಲಿ ತಮಗೇಕೆ ನಿಂಬೆಹಣ್ಣು ಕೊಡುತ್ತಿಲ್ಲವೆಂದು ಕೇಳುತ್ತಿದ್ದಾನೆ. ಮತ್ತೊಬ್ಬ ಖೈದಿ ಬೆಳಿಗ್ಗೆ 2 ಲೋಟ ಹಾಲು ಕೊಡುವ ಅವಕಾಶವಿದೆಯಾ ಎಂದು ಕೇಳಿದ್ದಾನೆ. ಇನ್ನೊಬ್ಬ ತಮಗೇಕೆ ಸೊಳ್ಳೆಬತ್ತಿ ನೀಡುತ್ತಿಲ್ಲವೆಂದು ಕೇಳುತ್ತಿದ್ದಾನೆ. ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕಾರಿಗಳು ಉತ್ತರ ಕೊಟ್ಟರೂ ಕೆಲವೊಮ್ಮೆ ಅದು ಖೈದಿಗಳಿಗೆ ಸಮಾಧಾನ ತರುತ್ತಿಲ್ಲ.

ಎಲ್ಲಕ್ಕಿಂತ ಹೆಚ್ಚಾಗಿ ತಮ್ಮಗಳ ಆರೋಗ್ಯ ಕುರಿತ ಮಾಹಿತಿಯನ್ನು ಖೈದಿಗಳು ಪಡೆದುಕೊಳ್ಳುತ್ತಿರುವುದು ಹೆಚ್ಚಾಗಿ ಕಂಡು ಬಂದಿದೆ. ವಾಸ್ತವವಾಗಿ ಜೈಲಿನ ವೈದ್ಯರು ಖೈದಿಗಳಿಗೆ ಆರೋಗ್ಯ ಮಾಹಿತಿಯನ್ನು ನೀಡುವುದಿಲ್ಲ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆಯಡಿ ಆರೋಗ್ಯ ಕುರಿತ ಮಾಹಿತಿ ಪಡೆಯುವ ಖೈದಿಗಳು ಇದನ್ನು ಜಾಮೀನು ಪಡೆಯಲು ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದಾರೆ. ತನ್ನ ಪ್ರೇಯಸಿಯನ್ನು ಕೊಂದು ಜೈಲು ಸೇರಿರುವ ಸುಶೀಲ್ ಶರ್ಮಾ ಎಂಬ ಅಪರಾಧಿ ಕಾನೂನು ಕುರಿತು ಆಪಾರ ಪರಿಜ್ಞಾನ ಹೊಂದಿದ್ದು, ಈತನೇ ಸಹ ಖೈದಿಗಳಿಗೆ ಮಾಹಿತಿ ಹಕ್ಕು ಕುರಿತು ತಿಳುವಳಿಕೆ ಹೇಳುತ್ತಿದ್ದಾನಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...