alex Certify
ಕನ್ನಡ ದುನಿಯಾ       Mobile App
       

Kannada Duniya

ಸಮುದ್ರದ ಭಾರೀ ಅಲೆಗಳಿಂದ ಕುಟೀರಗಳಿಗೆ ಕುತ್ತು

ಪಣಜಿ: ಕಳೆದೆರಡು ದಿನಗಳಿಂದ ಸಮುದ್ರದ ಅಲೆಗಳು ಭಾರೀ ಪ್ರಮಾಣದಲ್ಲಿ ತಟಕ್ಕೆ ಅಪ್ಪಳಿಸುತ್ತಿದ್ದು, ಗೋವಾದ ಪ್ರಮುಖ ಸಮುದ್ರ ತೀರದಲ್ಲಿರುವ ಚಿಕ್ಕ ಚಿಕ್ಕ ಪ್ರವಾಸಿಗರ ಕುಟೀರಗಳಿಗೆ (ಗುಡಿಸಲು) ತೀವ್ರತರದಲ್ಲಿ ಹಾನಿಯಾಗಿದೆ.

ಬಾಗಾ ಸಿಕ್ವೇರಿಯಂ ವ್ಯಾಪ್ತಿಯಲ್ಲಿರುವ ಸಾಲ್ಕೇಟ್ ನ ಬರ್ಡೇಜ್, ಕೋಲ್ವಾ-ಬೆನೋಲ್ವಿಮ್-ಮಜೋರ್ಡಾ ಮತ್ತು ಕಣಕೋಣಾದ ಪಾಟ್ನೆಮ್- ಕೊಲಂಬ ಭಾಗಗಳಲ್ಲಿ ಹಾನಿಯಾಗಿದೆ. ಹೀಗಾಗಿ ಕುಟೀರಗಳ ಮಾಲೀಕರು ಪೀಠೋಪಕರಣಗಳನ್ನು ಸಾಗಿಸಿದ್ದಾರೆ.

ಸಮುದ್ರ ಅಲೆಯುಬ್ಬರದಿಂದ ಪ್ರವಾಸಿಗರೂ ಸಮುದ್ರ ತಟಕ್ಕೆ ಕಾಲಿಡುತ್ತಿಲ್ಲ. ಸಂಜೆ ಅಬ್ಬರ ಇಳಿಯಲಿದ್ದು, ಬಳಿಕವೇ ಇತ್ತ ದಾವಿಸುತ್ತಿದ್ದಾರೆ. ಅಲ್ಲದೆ, ಪ್ರವಾಸೋದ್ಯಮ ಇಲಾಖೆ ಸಹ ಎಚ್ಚರಿಕೆ ಕೊಟ್ಟಿದ್ದು, ಸಾಹಸೋದ್ಯಮಗಳನ್ನು ಸದ್ಯಕ್ಕೆ ನಿಲ್ಲಿಸಬೇಕು. ಜತೆಗೆ ಗುಡಿಸಲುಗಳ ಮಾಲೀಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದೆ. ಹವಾಮಾನ ವೈಪರೀತ್ಯ ಹಾಗೂ ಸೈಕ್ಲೋನ್ ಪರಿಣಾಮ ಸಹ ಅಲೆಯುಬ್ಬರಕ್ಕೆ ಕಾರಣ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...