alex Certify
ಕನ್ನಡ ದುನಿಯಾ       Mobile App
       

Kannada Duniya

ಗೋವಾ ವೇಶ್ಯಾವಾಟಿಕೆ ಅಡ್ಡೆಗೂ ಬೇಕು ಆಧಾರ್…!

ಬ್ಯಾಂಕ್ ಗಳು, ಟೆಲಿಕಾಂ ಕಂಪನಿಗಳು ಮಾತ್ರ ಆಧಾರ್ ಕಾರ್ಡ್ ಕೇಳ್ತಿಲ್ಲ, ಇನ್ಮೇಲೆ ಗೋವಾದ ಪಿಂಪ್ ಗಳಿಗೂ ಆಧಾರ್ ದಾಖಲೆ ಕೊಡಬೇಕು. ಇಲ್ಲಿ ವೇಶ್ಯಾವಾಟಿಕೆಗೂ ಆಧಾರ್ ಕಡ್ಡಾಯ ಅನ್ನೋದನ್ನು ದೆಹಲಿಯ ಐವರು ಯುವಕರು ಬಹಿರಂಗಪಡಿಸಿದ್ದಾರೆ.

ಸ್ನೇಹಿತನ ಬ್ಯಾಚುಲರ್ ಪಾರ್ಟಿಗಾಗಿ ಇವರು ಗೋವಾಕ್ಕೆ ತೆರಳಿದ್ರು. ನಾರ್ತ್ ಗೋವಾದ ಬೀಚ್ ಬಳಿ ಹೋಟೆಲ್ ಬುಕ್ಕಿಂಗ್ ಮಾಡಿಕೊಂಡು, ಐವರು ಹುಡುಗಿಯರು ಬೇಕು ಅಂತಾ ವಿಚಾರಿಸಿದ್ದಾರೆ. ಆದಷ್ಟು ಬೇಗ ಯುವತಿಯರನ್ನು ಪೂರೈಸುವುದಾಗಿ ಪಿಂಪ್ ಒಬ್ಬ ಭರವಸೆ ಕೊಟ್ಟಿದ್ದ.

ಆದ್ರೆ ಈ ಯುವಕರು ದೆಹಲಿಯವರು ಅಂತಾ ಗೊತ್ತಾಗ್ತಿದ್ದಂತೆ ಐವರ ಆಧಾರ್ ಕಾರ್ಡ್ ಫೋಟೋವನ್ನು ವಾಟ್ಸಾಪ್ ಮೂಲಕ ಕಳಿಸುವಂತೆ ಸೂಚಿಸಿದ್ದಾನೆ. ಅಷ್ಟೇ ಅಲ್ಲ ಹೋಟೆಲ್ ರೂಮಿನ ಕೀಗಳ ಫೋಟೋ ಕೂಡ ಬೇಕು ಅಂತಾ ಹೇಳಿದ್ದಾನೆ. ಇದನ್ನು ಕೇಳಿ ದೆಹಲಿ ಯುವಕರು ಅಚ್ಚರಿಗೊಂಡಿದ್ರು.

ಗೋವಾದಲ್ಲಿ ಮಾಂಸದಂಧೆಗೆ ಬ್ರೇಕ್ ಹಾಕಲು ಪೊಲೀಸರು ಸಾಕಷ್ಟು ಪ್ರಯತ್ನ ಮಾಡ್ತಿದ್ದಾರಂತೆ. ಹಾಗಾಗಿ ಗ್ರಾಹಕರ ವೇಷದಲ್ಲೇನಾದ್ರೂ ಪೊಲೀಸರು ಬಂದಿದ್ದಾರಾ ಅನ್ನೋದನ್ನು ಕನ್ಫರ್ಮ್ ಮಾಡಿಕೊಳ್ಳಲು ಪಿಂಪ್ ಗಳು ಆಧಾರ್ ವಿವರ ಕೇಳ್ತಿದ್ದಾರೆ. ಪೊಲೀಸರಿಗೆ ಸಿಕ್ಕಿಬೀಳದಂತೆ ಕೇರ್ಫುಲ್ ಆಗಿರಲು ಈ ಪ್ಲಾನ್ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...