alex Certify
ಕನ್ನಡ ದುನಿಯಾ       Mobile App
       

Kannada Duniya

ಮುಲಾಯಂ ಗೆ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ

mulayam-singh-house-etawah_650ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಜೈಲುಗಳಲ್ಲಿರುವ ಸಾಮಾನ್ಯ ಕೈದಿಗಳೂ ಒಂದೇ ಡಾನ್ ಗಳು ಒಂದೇ ಎಂದಿರುವ ಸರ್ಕಾರ, ಎಲ್ಲರನ್ನು ಸಮಾನವಾಗಿ ಟ್ರೀಟ್ ಮಾಡುವಂತೆ ಸೂಚಿಸಲಾಗಿದೆ.

ವಿಐಪಿ ಸಂಸ್ಕೃತಿಗೂ ಅಂತ್ಯ ಹಾಡಲು ಸರ್ಕಾರ ಮುಂದಾಗಿದ್ದು, ಇದರ ಬಿಸಿ ಈಗ ಸಮಾಜವಾದಿ ಪಕ್ಷದ ನೇತಾರ ಮುಲಾಯಂ ಸಿಂಗ್ ಯಾದವ್ ಅವರಿಗೂ ತಟ್ಟಿದೆ. ಇಟವಾದಲ್ಲಿರುವ ಮುಲಾಯಂ ಸಿಂಗ್ ರ ಬೃಹತ್ ಬಂಗಲೆ ಮೇಲೆ ದಾಳಿ ನಡೆಸಿದ ವಿದ್ಯುತ್ ನಿಗಮದ ಅಧಿಕಾರಿಗಳು ನಿಗದಿಪಡಿಸಿದ್ದಕ್ಕಿಂತ ಅಧಿಕ ವಿದ್ಯುತ್ ನ್ನು ಅಕ್ರಮವಾಗಿ ಬಳಸಿಕೊಂಡಿರುವುದನ್ನು ಪತ್ತೆ ಹಚ್ಚಿದ್ದಾರೆ.

ಈ ಬೃಹತ್ ಬಂಗಲೆಯಲ್ಲಿ 12 ಕ್ಕೂ ಅಧಿಕ ಬೆಡ್ ರೂಮ್ ಗಳಿದ್ದು, ಪ್ರತ್ಯೇಕ ಹವಾನಿಯಂತ್ರಣ ಘಟಕ ಹೊಂದಿತ್ತೆಂದು ಹೇಳಲಾಗಿದೆ. ಉಷ್ಣಾಂಶ ನಿಯಂತ್ರಿತ ಸ್ವಿಮ್ಮಿಂಗ್ ಪೂಲ್, ಎಲಿವೇಟರ್ ಈ ಬಂಗಲೆಯಲ್ಲಿದ್ದು, ನಿಗದಿಪಡಿಸಿದ್ದಕ್ಕಿಂತ 8 ಪಟ್ಟು ಅಧಿಕ ವಿದ್ಯುತ್ ಬಳಸಿಕೊಂಡಿರುವುದು ದಾಳಿಯ ವೇಳೆ ಪತ್ತೆ ಹಚ್ಚಲಾಗಿದೆ. ಅಲ್ಲದೇ ಸುಮಾರು 4 ಲಕ್ಷ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದು ಕಂಡು ಬಂದಿದೆ. ಈಗ ಅಧಿಕ ವಿದ್ಯುತ್ ಬಳಕೆಗೆ ದಂಡ ವಿಧಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...