alex Certify
ಕನ್ನಡ ದುನಿಯಾ       Mobile App
       

Kannada Duniya

ಕೋರ್ಟ್ ಆವರಣದಲ್ಲೇ ಖೈದಿಯ ಹತ್ಯೆ

ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಪೊಲೀಸ್ ಭದ್ರತೆಯಲ್ಲಿ ಆಗಮಿಸುತ್ತಿದ್ದ ಖೈದಿಯೊಬ್ಬನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ವಿನೋದ್ ಕೊಲೆಯಾದ ಖೈದಿ. ಈತ ಕೋರ್ಟ್ ನಲ್ಲಿ ವಿಚಾರಣೆ ಮುಗಿಸಿಕೊಂಡು ಪೊಲೀಸರೊಂದಿಗೆ ಬರುತ್ತಿದ್ದ.

ಕ್ಯಾಂಟೀನ್ ಸಮೀಪದಲ್ಲಿರುವ ಕಾರಿಡಾರ್ ನಲ್ಲಿ ಬರುತ್ತಿದ್ದಾಗ ಆಗಂತುಕನೊಬ್ಬ ಖೈದಿಯ ಮೇಲೆ ಗುಂಡು ಹಾರಿಸಿದ್ದಾನೆ. ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದ್ರೆ ಅಷ್ಟರಲ್ಲಾಗ್ಲೇ ಖೈದಿ ವಿನೋದ್ ಮೃತಪಟ್ಟಿದ್ದ.

ಹಂತಕ ತಾನೊಬ್ಬ ಕಕ್ಷಿಗಾರನಂತೆ ಪೋಸು ಕೊಟ್ಟಿದ್ದ. ದಿಢೀರನೆ ಗನ್ ಹೊರತೆಗೆದು ಶೂಟ್ ಮಾಡಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಇದೇ ಕೋರ್ಟ್ ಆವರಣದಲ್ಲೇ ಕೊಲೆ ಯತ್ನ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿಯನ್ನು ಹತ್ಯೆ ಮಾಡಲಾಗಿತ್ತು.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...