alex Certify
ಕನ್ನಡ ದುನಿಯಾ       Mobile App
       

Kannada Duniya

ಶತಾಯುಷಿಯ ಕಳಕಳಿಗೆ ಶಿರಬಾಗಿ ನಮಿಸಿದ ಮೋದಿ

pm 104

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನಕ್ಕೆ ಕರೆ ನೀಡಿದ ನಂತರ ದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿದೆ. ಗ್ರಾಮಾಂತರ, ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಮಾಹಿತಿ, ಜಾಗೃತಿ ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಪ್ರಧಾನಿ ಕರೆಗೆ ಓಗೊಟ್ಟ ಅನೇಕರು ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಮತ್ತೆ ಕೆಲವರು ನಿರ್ಮಾಣಕ್ಕೆ ಕಾರಣವಾಗಿದ್ದಾರೆ. ಛತ್ತೀಸ್ ಗಢದಲ್ಲಿ ಶೌಚಾಲಯ ನಿರ್ಮಿಸಲು ಬಡ ಮಹಿಳೆಯೊಬ್ಬರು ತಮ್ಮ ಮೇಕೆಗಳನ್ನೇ ಮಾರಿದ್ದಾರೆ. ಅದನ್ನು ತಿಳಿದ ಪ್ರಧಾನಿ ನರೇಂದ್ರ ಮೋದಿ ಶಿರಬಾಗಿ ನಮಿಸಿದ್ದಾರೆ. ಛತ್ತೀಸ್ ಗಢದ ಧಮರಿ ಜಿಲ್ಲೆಯ ಕೊಟ್ಟಬಾರಿ ಗ್ರಾಮದ 104 ವರ್ಷದ ಮಹಿಳೆ ಕುನ್ವರ್ ಬಾಯಿ ಅವರ ಮನೆಯಲ್ಲಿ ಶೌಚಾಲಯ ಇರಲಿಲ್ಲ. ಬಡ ಮಹಿಳೆ ಕುನ್ವರ್ ಬಾಯಿಗೆ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಗೊತ್ತಾಗಿದೆ.

ತಾನೂ ಮನೆಯಲ್ಲಿ ಶೌಚಾಲಯ ನಿರ್ಮಿಸಬೇಕೆಂದುಕೊಂಡ ಅವರು ಸಾಕಿದ್ದ ಮೇಕೆಗಳನ್ನು ಮಾರಿದ್ದಾರೆ. ಅದರಲ್ಲಿ ಬಂದ ಹಣದಲ್ಲಿ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಗ್ರಾಮದ ಜನರಿಗೂ ಶೌಚಾಲಯ ನಿರ್ಮಿಸಿಕೊಳ್ಳುವಂತೆ ಪ್ರೇರೇಪಣೆ ನೀಡಿದ್ದಾರೆ. ಅವರ ಬಗ್ಗೆ ಮೋದಿ ಅವರಿಗೂ ಮಾಹಿತಿ ಗೊತ್ತಾಗಿದೆ.

ಛತ್ತೀಸ್ ಗಢದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ನರೇಂದ್ರ ಮೋದಿ, ಕುನ್ವರ್ ಬಾಯಿ ಅವರ ಪಾದಕ್ಕೆ ಶಿರಬಾಗಿ ನಮಿಸಿದರು. ಸ್ವಚ್ಛ ಭಾರತ ಅಭಿಯಾನಕ್ಕೆ ಕೈಜೋಡಿಸಿರುವ ಈ ತಾಯಿಯ ಕಾರ್ಯ ಎಲ್ಲರಿಗೂ ಸ್ಪೂರ್ತಿಯಾಗಲಿ. ಈ ಮಹಾತಾಯಿಗೆ ನಾನು ನಮಿಸುತ್ತೇನೆ ಎಂದು ಹೇಳಿದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...