alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಚಾರದ ನಡುವೆ ಕಾಂಗ್ರೆಸ್ ಯುವರಾಜನ ಸ್ಮಾಲ್ ಬ್ರೇಕ್

ಗುಜರಾತ್ ನಲ್ಲಿಂದು ಮೊದಲ ಹಂತದ ಮತದಾನ ನಡೆಯುತ್ತಿದೆ. ಇನ್ನೊಂದೆಡೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ 2ನೇ ಹಂತದ ಚುನಾವಣೆಗೆ ಪ್ರಚಾರ ಶುರು ಮಾಡಿದ್ದಾರೆ. ನಿನ್ನೆ ಇಡೀ ದಿನ ರಾಹುಲ್ ಬಹಿರಂಗ ಸಮಾವೇಶಗಳಲ್ಲಿ ಮತಬೇಟೆ ಮಾಡಿದ್ರು.

ತಾರಾಪುರ್ ರ್ಯಾಲಿ ನಂತರ ಯುವರಾಜ ಚಿಕ್ಕದೊಂದು ಬ್ರೇಕ್ ತೆಗೆದುಕೊಂಡ್ರು. ರಸ್ತೆ ಬದಿಯಲ್ಲಿದ್ದ ಪಾವ್ ಭಾಜಿ ಮಳಿಗೆಗೆ ಲಗ್ಗೆ ಇಟ್ಟಿದ್ರು. ಹತ್ತಾರು ಬೆಂಬಲಿಗರ ಜೊತೆಗೆ ಬಿಸಿ ಬಿಸಿ ಪಾವ್ ಭಾಜಿ ಸವಿಯಲು ರಾಹುಲ್ ಕಾಯುತ್ತಿರುವ ಫೋಟೋಗಳು ಕೂಡ ವೈರಲ್ ಆಗಿವೆ.

ಕಾಂಗ್ರೆಸ್ ಯುವರಾಜ ಪಾವ್ ಭಾಜಿ ಮಳಿಗೆಗೆ ಬಂದಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂತೆ ಜನರು ಕೂಡ ಅವರನ್ನು ಸುತ್ತುವರಿದ್ರು. ಫೋಟೋ ಕ್ಲಿಕ್ಕಿಸಿಕೊಂಡ್ರು. ಡಿಸೆಂಬರ್ 14ರಂದು ಗುಜರಾತ್ ನಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ. ಡಿಸೆಂಬರ್ 18ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...