alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ತಿ ನೀಡದ್ದಕ್ಕೆ ವೃದ್ದನಿಗೆ ರಸ್ತೆ ಮಧ್ಯೆ ಚಪ್ಪಲಿ ಏಟು

ಬಿಜ್ನೋರ್ ನಲ್ಲಿ ವಯಸ್ಸಾದ ವ್ಯಕ್ತಿ ಮೇಲೆ ಸಾರ್ವಜನಿಕರೆದುರು ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ವ್ಯಕ್ತಿಗಳು ವೃದ್ಧನಿಗೆ ಹೊಡೆಯುತ್ತಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಹೆಸರು ರಾಜಕುಮಾರ. ಹಲ್ಲೆ ನಡೆಸಿದವರು ಸೋದರನ ಹೆಂಡತಿ ಹಾಗೂ ಆಕೆ ಮಗ ಎನ್ನಲಾಗಿದೆ.

ಬಲವಂತವಾಗಿ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಇಬ್ಬರು ಯತ್ನಿಸಿದ್ದರು ಎನ್ನಲಾಗಿದೆ. ಇದನ್ನು ರಾಜಕುಮಾರ ನಿರಾಕರಿಸಿದ್ದಾನೆ. ಹಾಗಾಗಿ ಸಾರ್ವಜನಿಕರೆದುರು ಹಲ್ಲೆ ನಡೆಸಿ ಅದ್ರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.

ಪೀಡಿತ ರಾಜಕುಮಾರನ ಸಹೋದರ ಮೃತಪಟ್ಟ ನಂತ್ರ ಸಹೋದರನ ಪತ್ನಿ ಹಾಗೂ ಮಕ್ಕಳು ಆಸ್ತಿ ನೀಡುವಂತೆ ಒತ್ತಡ ಹಾಕುತ್ತಿದ್ದರು. ಇದಕ್ಕೆ ರಾಜಕುಮಾರ ನಿರಾಕರಿಸಿದ್ದಾನೆ. ಹಾಗಾಗಿ ಚಪ್ಪಲಿ ಹಾಗೂ ಕೋಲಿನಿಂದ ರಾಜಕುಮಾರನ ಮೇಲೆ ಹಲ್ಲೆ ನಡೆಸಿದ್ದಾರೆ. ರಾಜಕುಮಾರ ಈ ಸಂಬಂಧ ದೂರು ದಾಖಲಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಯುತ್ತಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...