alex Certify
ಕನ್ನಡ ದುನಿಯಾ       Mobile App
       

Kannada Duniya

‘ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣ ಪ್ರಚಾರ ಬೇಡ’

ನವದೆಹಲಿ: ಭಾರತದಂತಹ ದೊಡ್ಡ ದೇಶದಲ್ಲಿ ಒಂದೆರಡು ಅತ್ಯಾಚಾರ ಪ್ರಕರಣಗಳನ್ನು ಪ್ರಚಾರ ಮಾಡಬಾರದು ಎಂದು ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಹೇಳಿದ್ದಾರೆ.

ದೊಡ್ಡ ದೇಶದಲ್ಲಿ 1 ಅಥವಾ 2 ಅತ್ಯಾಚಾರ ಪ್ರಕರಣಗಳನ್ನು ಪ್ರಚುರಪಡಿಸಿಬಾರದು. ಅಂತಹ ಘಟನೆಗಳು ದುರದೃಷ್ಟಕರ. ಕೆಲವೊಂದು ಸಂದರ್ಭದಲ್ಲಿ ಅವನ್ನು ತಡೆಯಲಾಗುವುದಿಲ್ಲ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ದೇಶದಲ್ಲಿ ನಡೆಯುತ್ತಿರುವ ಅತಿರೇಕದ ಅತ್ಯಾಚಾರ ಪ್ರಕರಣಗಳು ದುರದೃಷ್ಟಕರವಾಗಿವೆ. ದೊಡ್ಡ ದೇಶದಲ್ಲಿ 1 ಅಥವಾ 2 ಘಟನೆ ನಡೆದರೆ, ಅವು ಸಮಸ್ಯೆ ಸೃಷ್ಠಿಸಬಾರದು. ಅಂತಹ ಘಟನೆಗಳು ಮರುಕಳಿಸದಿರಲು ಕೇಂದ್ರ ಸರ್ಕಾರ ಸಕ್ರಿಯ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ನಿರಂತರವಾಗಿ ಅತ್ಯಾಚಾರ ಪ್ರಕರಣಗಳು ನಡೆದು, ಅಲ್ಲೋಲ ಕಲ್ಲೋಲ ಸೃಷ್ಠಿಸಿರುವ ಈ ಸಂದರ್ಭದಲ್ಲಿ ಕೇಂದ್ರ ಸಚಿವರು ನೀಡಿರುವ ಈ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...