alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಪ್ರದಾಯದ ಹೆಸರಿನಲ್ಲಿ ಇಲ್ಲಿ ನಡೆಯುತ್ತೆ ವೇಶ್ಯಾವಾಟಿಕೆ ದಂಧೆ…!

ಮಧ್ಯಪ್ರದೇಶದ ಬಂಛದಾ ಬುಡಕಟ್ಟು ಜನಾಂಗದ ಮಹಿಳೆಯರ ಸ್ಥಿತಿ ಶೋಚನೀಯ. ಅಂದದ ಬಟ್ಟೆ ತೊಟ್ಟು, ಢಾಳಾಗಿ ಮೇಕಪ್ ಮಾಡಿಕೊಂಡು ನೀಮಚ್-ಮನ್ಸೌರ್ ಹೈವೆ ಪಕ್ಕದಲ್ಲಿ ಕುಳಿತು ಗಿರಾಕಿಗಳಿಗಾಗಿ ಕಾಯುವುದೇ ಇವರ ಕೆಲಸ.

ಅಕ್ಕಪಕ್ಕದ ಗ್ರಾಮಸ್ಥರು, ಲಾರಿ ಚಾಲಕರೇ ಇವರ ಗ್ರಾಹಕರು. ನೀಮುಚ್, ರಟ್ಲಮ್ ಹಾಗೂ ಮಂಡ್ಸೌರ್ ನಲ್ಲಿ ಈ ಮಾಂಸದಂಧೆಯೇ ಒಂದು ಸಂಪ್ರದಾಯ. ಜೀವನ ನಿರ್ವಹಣೆಗಾಗಿ ಬಂಛದಾ ಸಮುದಾಯ ವೇಶ್ಯಾವಾಟಿಕೆಯನ್ನೇ ನೆಚ್ಚಿಕೊಂಡಿದೆ.

ಮನೆಯಲ್ಲಿ ಹೆಣ್ಣು ಮಗು ಹುಟ್ಟಿದೆ ಅಂದಾಕ್ಷಣ ದುಡಿಯುವ ಮತ್ತೊಂದು ಜೀವ ಭೂಮಿಗೆ ಬಂದಂತೆ ಅರ್ಥ. ತಂದೆ ಹಾಗೂ ಸಹೋದರರೇ ಇಲ್ಲಿ ಪಿಂಪ್ ಗಳು. ಮನೆಯ ಹೆಣ್ಣುಮಕ್ಕಳನ್ನು ವೇಶ್ಯಾವಾಟಿಕೆಗೆ ದೂಡ್ತಾರೆ. 12-14 ವರ್ಷ ತುಂಬಿದ ಹೆಣ್ಣುಮಕ್ಕಳನ್ನೆಲ್ಲ ದಂಧೆಗಿಳಿಸ್ತಾರೆ.

ತಲೆತಲಾಂತರದಿಂದ್ಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಮನೆಯ ಹೆಣ್ಣುಮಕ್ಕಳು ಮೈಮಾರಿ ಸಂಪಾದಿಸಿದ ಹಣದಲ್ಲಿ ಪುರುಷರು ಬದುಕು ಸಾಗಿಸ್ತಾರೆ. ಹಾಗಾಗಿ ಹೆಣ್ಣುಮಗು ಹುಟ್ಟಿದ್ರೆ ಈ ಕುಟುಂಬಗಳಲ್ಲಿ ಸಂಭ್ರಮ ಮನೆಮಾಡುತ್ತದೆ. 75 ಗ್ರಾಮದಲ್ಲಿ ಈ ಸಮುದಾಯದ ಒಟ್ಟು 23,000 ಜನರಿದ್ದಾರೆ. ಅವರಲ್ಲಿ ಶೇ.65ರಷ್ಟು ಮಹಿಳೆಯರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...