alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಸಿಗೋ ಸಿಗರೇಟ್ ಬೆಲೆ ಕೇಳಿದ್ರೆ ಸುತ್ತುತ್ತೆ ತಲೆ…!

ಗುಜರಾತ್‌ನ ಅಹಮದಾಬಾದ್ ಕೇಂದ್ರ ಕಾರಾಗೃಹದೊಳಗೆ ಧೂಮಪಾನ ತಡೆ, ತಂಬಾಕು ವರ್ಜನ ಅಭಿಯಾನಗಳು ನಡೆದರೂ ಪರಿಣಾಮ ಶೂನ್ಯ. ಕಳ್ಳ ಮಾರುಕಟ್ಟೆಯ ಮೂಲಕ ತಂಬಾಕು ಉತ್ಪನ್ನಗಳು ಕೈದಿಗಳ ಕೈಸೇರುತ್ತಿವೆ, ಅದೂ ಮಾರುಕಟ್ಟೆಯ ದರಕ್ಕಿಂತ 10 ಪಟ್ಟು ದುಬಾರಿ ಬೆಲೆಗೆ!

ಮಾರುಕಟ್ಟೆಯಲ್ಲಿ ಒಂದು ಕಟ್ಟು ಬೀಡಿಗೆ 20 ರೂ.ಇದ್ದರೆ, ಸಾಬರ್‌ಮತಿ ಜೈಲಿನಲ್ಲಿ 350 ರೂ. ಸ್ಮಾಲ್ ಸೈಜ್ ಸಿಗರೇಟ್‌ ಪ್ಯಾಕೆಟ್ ಬೆಲೆ 1,000 ರೂ.!

ಜೈಲಿನೊಳಕ್ಕೆ ನಿಯಮಿತವಾಗಿ ತಂಬಾಕು ಉತ್ಪನ್ನಗಳು ಪೂರೈಕೆಯಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಕೆಲವೊಂದು ಜೈಲು ಸಿಬ್ಬಂದಿಯೇ ಆ ಕಳ್ಳದಂಧೆಗೆ ಬೆಂಬಲವಾಗಿ ನಿಂತಿದ್ದಾರೆ ಎಂದು ಜೈಲಿನೊಳಗಿನ ಮೂಲಗಳು ಹೇಳಿವೆ.

ಇಷ್ಟೊಂದು ದುಬಾರಿ ಹಣವನ್ನು ಕೈದಿಗಳ ಸಂಬಂಧಿಗಳು ಹೊರಗಿನಿಂದ ಪಾವತಿಸುತ್ತಾರೆ ಅಥವಾ ಜೈಲಲ್ಲಿ ಕೈದಿಗಳಿಗೆ ಪಾವತಿಸಲಾಗುವ ಹಣವನ್ನೇ ಬಳಸಲಾಗುತ್ತದೆ.

ಈ ಕುರಿತು ಗುಜರಾತ್‌ನ ಗೃಹ ಖಾತೆಯ ರಾಜ್ಯ ಸಚಿವ ಪ್ರದೀಪ್ ಸಿನ್ಹಾ ಜಡೇಜಾ ಅವರ ಬಳಿ ಪ್ರಶ್ನಿಸಿದರೆ, ಜೈಲು ಆವರಣದೊಳಗೆ ತಂಬಾಕಿಗೆ ಅವಕಾಶವಿಲ್ಲ. ತಂಬಾಕು ದಂಧೆ ನಡೆಯುತ್ತಿರುವ ಬಗ್ಗೆ ಕೂಲಂಕುಶ ತನಿಖೆ ನಡೆಸಲಾಗುವುದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...