alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ವರ್ಷದಲ್ಲಿ 127 ಬಾರಿ ನಿಯಮ ಉಲ್ಲಂಘಿಸಿದ್ದಾನೆ ಭೂಪ

ಹೈದರಾಬಾದಿನ ಕಾರು ಚಾಲಕನೊಬ್ಬ ಟ್ರಾಫಿಕ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ. ಕಳೆದ ಒಂದು ವರ್ಷದಲ್ಲಿ ಈತ ವಾರಕ್ಕೆ ಮೂರು ಬಾರಿಯಂತೆ ಬರೋಬ್ಬರಿ 127 ಬಾರಿ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದು, ಇದಕ್ಕಾಗಿ 1.80 ಲಕ್ಷ ರೂ. ದಂಡ ತೆರಬೇಕಾಗಿದೆ.

ತೆಲಂಗಾಣದ ನೋಂದಣಿ ಹೊಂದಿರುವ ಹೋಂಡಾ ಜಾಜ್ ಕಾರಿನ ಚಾಲಕ ಹೈದರಾಬಾದಿನ ಔಟರ್ ರಿಂಗ್ ರೋಡ್ ನಲ್ಲಿ ಪ್ರತಿ ಬಾರಿಯೂ ಮಿತಿ ಮೀರಿದ ವೇಗದ ಕಾರಣಕ್ಕಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದು, ಇದರ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.

ಇದರ ಆಧಾರದ ಮೇಲೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಿದ್ದು, ಆದರೆ ಕಾರು ನೋಂದಣಿ ಮಾಡಿಸಿದವರು ತಮ್ಮ ಮೊಬೈಲ್ ನಂಬರ್ ಬದಲಾಯಿಸಿರುವ ಕಾರಣ ಚಲನ್ ವಿವರ ತಲುಪಿಯೇ ಇಲ್ಲ. ಹೀಗಾಗಿ ಪೊಲೀಸರು ಈ ಕಾರಿನ ನೋಂದಣಿ ಸಂಖ್ಯೆಯನ್ನು ಟೋಲ್ ಗೇಟ್ ಗೆ ನೀಡಿದ್ದು, ವಾಹನ ಕಂಡು ಬಂದರೆ ದಂಡ ವಸೂಲಿ ಮಾಡಲು ವಶಕ್ಕೆ ಪಡೆಯುವಂತೆ ಸೂಚಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...