alex Certify
ಕನ್ನಡ ದುನಿಯಾ       Mobile App
       

Kannada Duniya

ದಂಡ ಹಾಕಿದ್ದ ಪೊಲೀಸರಿಗೆ ಕೇಕ್ ಗಿಫ್ಟ್ ಕೊಟ್ಟ ರೈತ…!

ಕೇಕ್ ಅಂದ್ರೆ ಎಲ್ಲರಿಗೂ ಇಷ್ಟ. ಖುಷಿಯ ಸಂದರ್ಭಗಳಲ್ಲೆಲ್ಲ ಕೇಕ್ ಕತ್ತರಿಸೋದು ಕಾಮನ್. ಕೇರಳ ಪೊಲೀಸರಿಗೆ ರೈತನೊಬ್ಬನಿಂದ ಕೇಕ್ ಉಡುಗೊರೆಯಾಗಿ ಸಿಕ್ಕಿದೆ. ಕಣ್ಣಪ್ಪನ್ ಎಂಬ ರೈತ ತನಗೆ ಕುಡಿತ ಬಿಡಲು ಸಹಕರಿಸಿದ ಪೊಲೀಸರಿಗೆ ಕೇಕ್ ನೀಡಿ ಸತ್ಕರಿಸಿದ್ದಾನೆ.

ಕಳೆದ 23 ವರ್ಷಗಳಿಂದ್ಲೂ ಅವನಿಗೆ ಕುಡಿತದ ಚಟವಿತ್ತು. ಎಷ್ಟು ಪ್ರಯತ್ನಿಸಿದ್ರೂ ಅದನ್ನು ಬಿಡಲು ಸಾಧ್ಯವಾಗಿರಲಿಲ್ಲ. 4 ತಿಂಗಳುಗಳ ಹಿಂದೆ ಕುಡಿದು ವಾಹನ ಚಲಾಯಿಸುತ್ತಿದ್ದ ರೈತನಿಗೆ ಪೊಲೀಸರು ದಂಡ ಹಾಕಿದ್ದರು. ಪೊಲೀಸರು ದಂಡ ವಿಧಿಸಿದಾಗ ತಾನು ಮಾಡ್ತಿರೋ ತಪ್ಪು ಏನು ಅನ್ನೋದು ಅವನಿಗೆ ಅರ್ಥವಾಗಿತ್ತು.

ಪ್ರತಿ ತಿಂಗಳು ಮದ್ಯ ಸೇವನೆಗಾಗಿಯೇ ಆತ 10,000 ರೂಪಾಯಿ ಖರ್ಚು ಮಾಡುತ್ತಿದ್ದ. ಪೊಲೀಸರು ದಂಡ ಹಾಕಿದ ಬಳಿಕ ತಾನು ಕುಡಿತ ಬಿಡಲೇಬೇಕೆಂದು ಹಠ ತೊಟ್ಟು, ಅದರಲ್ಲಿ ಯಶಸ್ವಿ ಕೂಡ ಆಗಿದ್ದಾನೆ. ಇದೇ ಖುಷಿಯಲ್ಲಿ ಪೊಲೀಸರಿಗೆ ಕೇಕ್ ನೀಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...