alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶ ಭಾರತ

ಜಾಗತಿಕ ತಜ್ಞರು ಭಾರತೀಯರು ಮುಜುಗರಪಟ್ಟುಕೊಳ್ಳುವಂತಹ ಅಂಕಿ-ಅಂಶವನ್ನು ಹೊರ ಹಾಕಿದ್ದಾರೆ. ಸಮೀಕ್ಷೆಯಲ್ಲಿ ಭಾರತ, ಮಹಿಳೆಯರಿಗೆ ಅಸುರಕ್ಷಿತ ದೇಶ ಎಂಬುದು ಬಹಿರಂಗವಾಗಿದೆ. ಭಾರತದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ಹಿಂಸೆ ನಡೆಸುವುದು ತುಂಬಾ ಸುಲಭ. ಮಹಿಳೆಯರನ್ನು ಗುಲಾಮರನ್ನಾಗಿ ಮಾಡಿಕೊಳ್ಳುವುದು ಕೂಡ ಸುಲಭ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ. ಅಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲಿದ್ದರೆ ಅಪಘಾನಿಸ್ತಾನ ಹಾಗೂ ಸಿರಿಯಾ ದೇಶಗಳ ಹೆಸರು ನಂತರದ ಸ್ಥಾನಗಳಲ್ಲಿದೆ.

ಸಮೀಕ್ಷೆಯಲ್ಲಿ 55 ತಜ್ಞರು ಪಾಲ್ಗೊಂಡಿದ್ದರು. ಸೊಮಾಲಿಯಾ ಹಾಗೂ ಸೌದಿ ಅರೇಬಿಯಾ ಅಸುರಕ್ಷಿತ ದೇಶಗಳ ಪಟ್ಟಿಯಲ್ಲಿ ನಾಲ್ಕು ಹಾಗೂ ಐದನೇ ಸ್ಥಾನದಲ್ಲಿದೆ. ಭಾರತ ಮೊದಲ ಸ್ಥಾನದಲ್ಲಿರುವುದು ಮುಜುಗರದ ಸಂಗತಿಯಾದ್ರೆ ಆಶ್ಚರ್ಯಕರ ಸಂಗತಿಯೆಂದ್ರೆ ಅಮೆರಿಕಾ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

2011ರಲ್ಲಿ ನಡೆದ ಸಮೀಕ್ಷೆಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿತ್ತು. 2018ರಲ್ಲಿ ಅಸುರಕ್ಷಿತ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. 2012ರ ನಿರ್ಭಯಾ ಪ್ರಕರಣದ ನಂತ್ರ ಅಪರಾಧ ತಡೆಗೆ ಭಾರತದಲ್ಲಿ ಅನೇಕ ವಿಶೇಷ ಕ್ರಮ ತೆಗೆದುಕೊಳ್ಳಲಾಗಿದೆ.

ಭಾರತ ಸರ್ಕಾರದ ಅಂಕಿ ಅಂಶಗಳ ಪ್ರಕಾರ 2007ರಿಂದ 2016ರೊಳಗೆ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಶೇಕಡಾ 83ರಷ್ಟು ಏರಿಕೆಯಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...