alex Certify
ಕನ್ನಡ ದುನಿಯಾ       Mobile App
       

Kannada Duniya

ಸೈಕಲ್ ನಲ್ಲಿ ಶವ ಹೊತ್ತೊಯ್ಯಲು ಕಾರಣವಾಯ್ತು ಮದುವೆ

ಹಣವಿಲ್ಲದ ಕಾರಣ ವ್ಯಕ್ತಿಯೊಬ್ಬ ತನ್ನ ಪತ್ನಿ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ಘಟನೆ ಒಡಿಶಾದಲ್ಲಿ ನಡೆದಿತ್ತು. ಈಗ ಇಂಥಹದ್ದೇ ಇನ್ನೊಂದು ಘಟನೆ ಒಡಿಶಾದಲ್ಲಿ ಬೆಳಕಿಗೆ ಬಂದಿದೆ. ಶವ ಮುಟ್ಟಲು ಗ್ರಾಮಸ್ಥರು ನಿರಾಕರಿಸಿದ್ದರಿಂದ ಶವವನ್ನು ಸೈಕಲ್ ಮೇಲೆ ಹಾಕಿಕೊಂಡು ಸ್ಮಶಾನ ತಲುಪಿದ ಘಟನೆ ಬೌದ್ಧ ಜಿಲ್ಲೆಯಲ್ಲಿ ನಡೆದಿದೆ.

ಮೃತ ಮಹಿಳೆಯ ಸಹೋದರಿಯ ಗಂಡ ಬೇರೆ ಜಾತಿಯ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಇದೇ ಕಾರಣಕ್ಕೆ ಮಹಿಳೆ ಶವ ಮುಟ್ಟಲು ಗ್ರಾಮಸ್ಥರು ನಿರಾಕರಿಸಿದ್ದಾರೆ. ಕೃಷ್ಣಪಲ್ಲಿ ಗ್ರಾಮದ ನಿವಾಸಿ ಛತ್ರಬೂಜ್ ಎಂಬಾತ ಮೊದಲ ಮಡದಿಗೆ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ಬೇರೆ ಜಾತಿಯ ಮಹಿಳೆಯನ್ನು ಎರಡನೇ ಮದುವೆಯಾಗಿದ್ದ. ಇದಾದ ನಂತ್ರ ಗ್ರಾಮಸ್ಥರು ಆ ಕುಟುಂಬವನ್ನು ದೂರವಿಟ್ಟಿದ್ದರು.

ಛತ್ರಬೂಜ್ ನ ಪತ್ನಿ ಸಹೋದರಿಗೆ ಎರಡು ದಿನಗಳ ಹಿಂದೆ ಅತಿಸಾರ ಕಾಣಿಸಿಕೊಂಡಿದೆ. ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾಳೆ. ಆ್ಯಂಬುಲೆನ್ಸ್ ಮೂಲಕ ಶವವನ್ನು ಛತ್ರಬೂಜ್ ಮನೆಗೆ ತರಲಾಗಿದೆ. ಆದ್ರೆ ಗ್ರಾಮಸ್ಥರು ಶವ ಸಂಸ್ಕಾರಕ್ಕೆ ಬರಲು ನಿರಾಕರಿಸಿದ್ದಾರೆ. ಹಾಗಾಗಿ ಸೈಕಲ್ ಮೂಲಕ ಛತ್ರಬೂಜ್ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...