alex Certify
ಕನ್ನಡ ದುನಿಯಾ       Mobile App
       

Kannada Duniya

20 ವರ್ಷಗಳ ಬಳಿಕ ವರ್ಸೋವಾ ಬೀಚ್ ಗೆ ಬಂದಿವೆ ಅಪರೂಪದ ಆಮೆಗಳು

ಮುಂಬೈನ ವರ್ಸೋವಾ ಬೀಚ್ ನಲ್ಲಿ 20 ವರ್ಷಗಳ ಬಳಿಕ ಆಲಿವ್ ರಿಡ್ಲೆ ಆಮೆಗಳು ಕಾಣಿಸಿಕೊಂಡಿವೆ. ಬೀಚ್ ಸ್ವಚ್ಛಗೊಳಿಸುವ ವೇಳೆ ಹತ್ತಾರು ಆಮೆಗಳು ಪತ್ತೆಯಾಗಿವೆ. ಅವುಗಳನ್ನು ಸುರಕ್ಷಿತವಾಗಿ ಮತ್ತೆ ಸಮುದ್ರಕ್ಕೇ ಬಿಡಲಾಗಿದೆ.

ಅಫ್ರೋಜ್ ಶಾ ಎಂಬಾತ 2015ರಿಂದ್ಲೇ ಬೀಚ್ ಸ್ವಚ್ಛಗೊಳಿಸುವ ಅಭಿಯಾನ ಹಮ್ಮಿಕೊಂಡಿದ್ದಾರೆ. ಸ್ವಯಂ ಸೇವಕರೊಂದಿಗೆ ಆಗಮಿಸಿ ಆಗಾಗ ಬೀಚ್ ಕ್ಲೀನ್ ಮಾಡುತ್ತಾರೆ. ಆದ್ರೆ ಈ ಬಾರಿ ಮಾತ್ರ ಅವರಿಗೆ ಅಚ್ಚರಿ ಕಾದಿತ್ತು.

ಯಾಕಂದ್ರೆ ಕಳೆದ 20 ವರ್ಷಗಳಲ್ಲಿ ಒಮ್ಮೆಯೂ ವರ್ಸೋವಾ ಬೀಚ್ ನಲ್ಲಿ ಈ ವಿಶಿಷ್ಟ ಆಮೆಗಳು ಕಂಡಿರಲಿಲ್ಲ. ಈಗ ಒಟ್ಟಿಗೇ ಸುಮಾರು 80 ಆಮೆಗಳು ಕಾಣಸಿಕ್ಕಿವೆ. ನೀರಿನಲ್ಲಿ ರಾಸಾಯನಿಕಗಳ ಸೇರ್ಪಡೆಯಿಂದ ಆಮೆಗಳ ಸಂತತಿಗೂ ಕುತ್ತು ಬರುತ್ತಿದೆ.

ಅದರಲ್ಲೂ ಭಾರತದ ಸಮುದ್ರದಂಚಿನಲ್ಲಿ ಆಮೆಗಳ ಸಾವು ಈಗ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಕಾರಣ ಸ್ವಚ್ಛತೆಯ ಕೊರತೆ. ಈ ರೀತಿ ಆಗಾಗ ಬೀಚ್ ಸ್ವಚ್ಛ ಮಾಡುವುದರಿಂದ ಅಪರೂಪದ ಜಲಚರಗಳನ್ನು ಉಳಿಸಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...