alex Certify
ಕನ್ನಡ ದುನಿಯಾ       Mobile App
       

Kannada Duniya

ನಡು ರಸ್ತೆಯಲ್ಲೇ ತಲಾಖ್ ನೀಡಿದ ಪತಿರಾಯ

talaq-i

ಜೈಪುರ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಮತ್ತು ತಲಾಖ್ ಕುರಿತಾಗಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಪತ್ನಿಗೆ ತಲಾಖ್ ನೀಡಿದ್ದಾನೆ.

9 ವರ್ಷದ ಹಿಂದೆ ಮದುವೆಯಾಗಿದ್ದ ಜೈಪುರದ ಮಹಿಳೆಯೊಬ್ಬರಿಗೆ ಆಕೆಯ ಪತಿ ತಲಾಖ್ ನೀಡಿದ್ದು, ಇದನ್ನು ಪ್ರಶ್ನಿಸಿರುವ ಮಹಿಳೆ, ತಮ್ಮ ಮದುವೆಯನ್ನು ಮತ್ತೆ ಸಿಂಧುಗೊಳಿಸಬೇಕೆಂದು ಮಹಿಳಾ ಠಾಣೆಗೆ ಮನವಿ ಮಾಡಿದ್ದಾಳೆ. ಫರ್ಹಾಖಾನ್ ಎಂಬ ಮಹಿಳೆಯೇ ಹೀಗೆ ದೂರು ನೀಡಿದ್ದು, ತನ್ನ ಪತಿಯ ಮನೆಯ ಮುಂದೆ ಮಹಿಳಾ ಸಂಘಟನೆಯ ಬೆಂಬಲದಿಂದ ಹೋರಾಟ ನಡೆಸಿದ್ದಾಳೆ.

ಪತಿ, ಜೋಧ್ ಪುರದ ಇರ್ಫಾನ್ ಖಾನ್ ತನಗೆ ಮುಸ್ಲಿಂ ವೈಯಕ್ತಿಕ ಕಾನೂನಿನ ಅಡಿ ವಿಚ್ಛೇದನ ನೀಡಿದ್ದಾರೆ. ಆದರೆ, ಮನೆಯಿಂದ ಹೊರಗೆ ವಿಚ್ಛೇದನ ನೀಡಿದ್ದು ಇದು ವಿಡಿಯೋದಲ್ಲಿ ಸೆರೆಯಾಗಿದೆ. ಹೆಣ್ಣು ಮಗುವಿಗೆ ಜನ್ಮ ನೀಡಿದ್ದಕ್ಕೆ ಗಂಡನ ಮನೆಯವರು ತೊಂದರೆ ಕೊಟ್ಟಿದ್ದಾಗಿ ಆಕೆ ಅಳಲು ತೋಡಿಕೊಂಡಿದ್ದಾಳೆ. ಆತನೊಂದಿಗೆ ಬಾಳಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾಳೆ.

ಆದರೆ ಇದನ್ನು ಅಲ್ಲಗಳೆದಿರುವ ಇರ್ಪಾನ್ ಖಾನ್, ಮದುವೆಯಾಗಿ ಅನೇಕ ವರ್ಷಗಳೇ ಕಳೆದರೂ, ಆಕೆ ತಾಯಿಯಾಗಿರಲಿಲ್ಲವಾದ್ದರಿಂದ ಸುಮಾರು 7 ಲಕ್ಷ ರೂಪಾಯಿ ವ್ಯಯ ಮಾಡಿ ಚಿಕಿತ್ಸೆ ಕೊಡಿಸಲಾಗಿದೆ. ಅಲ್ಲದೇ ಆಕೆ ತನ್ನ ವರ್ತನೆಯನ್ನು ತಿದ್ದಿಕೊಳ್ಳದ ಕಾರಣ ವಿಚ್ಛೇದನ ನೀಡಿರುವುದಾಗಿ ತಿಳಿಸಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...