alex Certify
ಕನ್ನಡ ದುನಿಯಾ       Mobile App
       

Kannada Duniya

ಹಜ್ ಯಾತ್ರೆ ಕೈಗೊಳ್ಳಲು ಸಜ್ಜಾದ 32 ಮಂದಿ ಮಹಿಳೆಯರು

ಇದೇ ಮೊದಲ ಬಾರಿಗೆ 32 ಮಹಿಳೆಯರ ತಂಡ ಪುರುಷರಿಲ್ಲದೆ ಹಜ್ ಯಾತ್ರೆ ಕೈಗೊಳ್ಳಲು ಸಿದ್ದವಾಗಿದೆ. 32 ಮಹಿಳೆಯರ ಪೈಕಿ 12 ಮಂದಿ ಲಕ್ನೋ, 12 ಮಂದಿ ಕಾನ್ಪುರ್, ತಲಾ 4 ಮಂದಿ ಅಮೇಥಿ ಹಾಗೂ ಗೊಂಡಾ ಜಿಲ್ಲೆಗೆ ಸೇರಿದವರಾಗಿದ್ದಾರೆ.

ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ, 45 ವರ್ಷ ಮೇಲ್ಪಟ್ಟ ಮುಸ್ಲಿಂ ಮಹಿಳೆಯರು ಪುರುಷ ಆಪ್ತ (ಮೆಹ್ರಮ್‌) ನ ಸಹಾಯವಿಲ್ಲದೆಯೇ ಹಜ್‌ ಯಾತ್ರೆ ನಡೆಸುವುದಕ್ಕೆ ಅನುಮತಿ ನೀಡಿದ್ದು, ಈ ಹಿನ್ನಲೆಯಲ್ಲಿ 32 ಮಹಿಳೆಯರು ಹಜ್ ಯಾತ್ರೆ ಕೈಗೊಂಡಿದ್ದಾರೆ.

2017 ಡಿಸೆಂಬರ್ 31 ರಂದು ತಮ್ಮ ‘ಮನ್ ಕೀ ಬಾತ್’ ನಲ್ಲೂ ಈ ವಿಷಯ ಪ್ರಸ್ತಾಪಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಪುರುಷ ಆಪ್ತ (ಮೆಹ್ರಮ್‌) ಜೊತೆಯಲ್ಲಿದ್ದರೆ ಮಾತ್ರ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳಬಹುದೆಂಬ ನಿಯಮವನ್ನು ಕೈಬಿಡಲಾಗುವುದು ಎಂದು ಹೇಳಿದ್ದರಲ್ಲದೇ ಇದರಿಂದ ಹಜ್ ಯಾತ್ರೆ ಕೈಗೊಳ್ಳಲು ಹಲವು ಮಹಿಳೆಯರಿಗೆ ಅನುಕೂಲವಾಗಲಿದೆ ಎಂದಿದ್ದರು.

ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಜಮೈತ್‌ ಉಲಮಾ ಧಾರ್ಮಿಕ ಸಂಘಟನೆ, ಗಂಡ ಅಥವಾ ಯಾವುದೇ ರಕ್ತ ಸಂಬಂಧಿಯ ಸಹಯೋಗವಿಲ್ಲದೆ ಮಹಿಳೆಯರು ಸ್ವತಂತ್ರವಾಗಿ ಹಜ್ ಯಾತ್ರೆಗೆ ಹೋಗುವಂತಿಲ್ಲ. ಮಹಿಳೆಯರು ಒಂಟಿಯಾಗಿ ಯಾತ್ರೆ ಮಾಡಿದರೆ ಅದು ಅಪರಾಧವಾಗುತ್ತದೆ ಎಂದು ಹೇಳಿತ್ತು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...