alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈ ರೈಲು ನಿಲ್ದಾಣದಲ್ಲಿ ನಡೆದಿದೆ ಅಸಹ್ಯಕರ ಘಟನೆ

ಮುಂಬೈ: ರೈಲ್ವೆ ನಿಲ್ದಾಣ ಗೋಡೆಗಳು, ಪಾದಚಾರಿ ಮಾರ್ಗಗಳು, ಸರ್ಕಾರಿ ಕಚೇರಿ ಕಾರಿಡಾರ್ ಗಳು ಹೀಗೆ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಗುಟ್ಕಾ ಉಗಿಯುವ ಅಭ್ಯಾಸ ಭಾರತದಲ್ಲಿ ಕಡಿಮೆ ಆಗುವ ಲಕ್ಷಣ ಕಾಣಿಸುತ್ತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವ ಅಭ್ಯಾಸ ತಡೆಯಬೇಕೆಂಬ ನಡೆಸಿರುವ ಪ್ರಯತ್ನಗಳು ಸಫಲತೆ ಕಾಣಿಸುತ್ತಿಲ್ಲ.

ಮುಂಬೈನ ಬೊರಿವಲಿ ರೈಲ್ವೆ ನಿಲ್ದಾಣದಲ್ಲಿ ಅಸಹ್ಯಕರ ಘಟನೆಯೊಂದು ನಡೆದಿದೆ. ಮಹಿಳೆಯರಿಬ್ಬರು ರೈಲು ನಿಲ್ದಾಣದ ಆವರಣದೊಳಗೆ ಫ್ಲಾಟ್ ಫಾರ್ಮ್ ಕಡೆ ನಡೆದು ಬರುತ್ತಿದ್ದಾಗ ಕೆಲವು ವ್ಯಕ್ತಿಗಳು ಗುಟ್ಕಾ ಉಗುಳಿದ್ದು, ಅದು ನೇರ ಅವರ ಬಟ್ಟೆ ಮೆಲೆ ಬಿದ್ದಿದೆ.

24 ವರ್ಷದ ಸಂಶೋಧನಾ ವಿಶ್ಲೇಷಕರಾದ ಸಂಜನಾ ರಾವ್ ಈ ಬಗ್ಗೆ ಟ್ವೀಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ನಾನು ಮತ್ತು ನನ್ನ ಸ್ನೇಹಿತೆ ರೈಲ್ವೆ ನಿಲ್ದಾಣದಲ್ಲಿ ನಡೆದು ಹೋಗುತ್ತಿದ್ದಾಗ ರೈಲಿನಲ್ಲಿದ್ದ ಕೆಲವರು ನಮ್ಮ ಮೇಲೆ ಉಗುಳಿದ್ದಾರೆ. ಸ್ವಚ್ಛ ಭಾರತ ಮತ್ತು ಮಹಿಳಾ ರಕ್ಷಣೆ ಎಂಬ ಭರವಸೆ ಹಾಸ್ಯಾಸ್ಪದ ಘೋಷಣೆ ಎಂದು ಖಾರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ರೈಲ್ವೆಯ ಹಿರಿಯ ವಿಭಾಗೀಯ ಭದ್ರತಾ ಆಯುಕ್ತ (ಮುಂಬೈ ಕೇಂದ್ರ ವಿಭಾಗ) ಅನೂಪ್ ಶುಕ್ಲಾ, ತೊಂದರೆಗೊಳಗಾದವರೊಂದಿಗೆ ಮಾತನಾಡುತ್ತೇವೆ ಮತ್ತು ಅಪರಾಧಿಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...