alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಾರಣೆ ಆರಂಭಗೊಂಡ 7 ಗಂಟೆಯೊಳಗೆ ಪ್ರಕಟವಾಯ್ತು ತೀರ್ಪು

ಭಾರತದಲ್ಲಿ ಕೋರ್ಟ್ ಮೆಟ್ಟಿಲು ಏರಿದ್ರೆ, ಮುಗಿದೇ ಹೋಯಿತು. ವರ್ಷಗಟ್ಟಲೇ ಕೋರ್ಟ್ ಮೆಟ್ಟಿಲು ಹತ್ತಿ ಹತ್ತಿ ಸಾಕಾಗುತ್ತದೆ. ಇಂತಹದರಲ್ಲಿ ಮಧ್ಯಪ್ರದೇಶದ ಉಜೈನಿ ಕೋರ್ಟ್ ವಿಚಾರಣೆ ಶುರುವಾಗಿ 7 ಗಂಟೆಯೊಳಗೆ ತೀರ್ಪು ನೀಡಿದ್ದು, 14 ವರ್ಷದ ಬಾಲಕ ಅತ್ಯಾಚಾರಿ ಎಂದು ಧೃಡ ಪಟ್ಟ ಹಿನ್ನೆಲೆಯಲ್ಲಿ, ಕೋರ್ಟ್ ಆರೋಪಿಯನ್ನು 2 ವರ್ಷ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲು ಆದೇಶಿಸಿದೆ.

ಆಗಸ್ಟ್ 15 ರಂದು ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಆರೋಪದಡಿ 14 ವರ್ಷದ ಬಾಲಕನ ವಿರುದ್ಧ ಪೋಸ್ಕೋ ಕಾಯ್ದೆಯ ಅಡಿ ದೂರು ದಾಖಲಿಸಲಾಗಿತ್ತು. ಪ್ರಕರಣ ನಡೆದ ಐದೇ ದಿನದಲ್ಲಿ ಅಪರಾಧಿಗೆ ಶಿಕ್ಷೆ ನೀಡಲಾಗಿದ್ದು, ನ್ಯಾಯಾಲಯದ ಇತಿಹಾಸದಲ್ಲೇ ಮೊದಲು ಎನ್ನಲಾಗುತ್ತಿದೆ.

ಬಾಲಾಪರಾಧಿ ನ್ಯಾಯಾಲಯದ ನ್ಯಾ.ತ್ರಿಪ್ತಿ ಪಾಂಡ್ಯ ಬಾಲಕನಿಗೆ ಶಿಕ್ಷೆಯ ಪ್ರಮಾಣವನ್ನು ಆದೇಶಿಸಿದ್ದಾರೆ. ಕೋರ್ಟ್ ಸತತ ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಬೆಳಗ್ಗೆ 10.45ಕ್ಕೆ ವಿಚಾರಣೆ ಆರಂಭಿಸಿ, ಸಂಜೆ 6 ಗಂಟೆಯೊಳಗೆ ಪ್ರಕರಣವನ್ನು ಇತ್ಯರ್ಥ ಮಾಡಿದೆ. ಈ ಮೂಲಕ ಕೋರ್ಟ್ ಹೊಸ ಶಕೆ ಆರಂಭಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...