alex Certify
ಕನ್ನಡ ದುನಿಯಾ       Mobile App
       

Kannada Duniya

ಕೇವಲ ಐದೇ ನಿಮಿಷದಲ್ಲಿ ಪಾಸಾಯ್ತು 4 ಬಿಲ್

virbhadrasingh cm

ಶಿಮ್ಲಾ: ಯಾವುದೇ ಕಾಯ್ದೆ, ಕಾನೂನು ರೂಪಿಸುವಾಗ ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ, ಪರ- ವಿರೋಧ ಚರ್ಚೆ ನಡೆಯುವುದು ಸಾಮಾನ್ಯ. ಆದರೆ, ಇದೊಂದು ವಿಷಯಕ್ಕೆ ಮಾತ್ರ ಯಾವುದೇ ಚರ್ಚೆ ಇಲ್ಲದೇ, ಕೇವಲ 5 ನಿಮಿಷದಲ್ಲಿಯೇ 4 ಪ್ರಮುಖ ಬಿಲ್ ಪಾಸ್ ಮಾಡಲಾಗಿದೆ.

ಅಷ್ಟಕ್ಕೂ ಏನದು ಅಂತಿರಾ? ಶಾಸಕರು, ಸಚಿವರ ವೇತನ, ಭತ್ಯೆ ಹೆಚ್ಚಳದ 4 ಬಿಲ್ ಗಳನ್ನು ಕೇವಲ 5 ನಿಮಿಷದಲ್ಲಿ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಪಾಸ್ ಮಾಡಲಾಗಿದೆ. ಶಾಸಕರು, ಮಾಜಿ ಶಾಸಕರು, ಸಚಿವರು ಮುಖ್ಯಮಂತ್ರಿಗಳ ವೇತನ, ಭತ್ಯೆ ಹೆಚ್ಚಳ ಮಾಡಲಾಗಿದೆ. ಇದಕ್ಕೆ ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಶಾಸಕರ ವೇತನ 1.32 ಲಕ್ಷ ರೂ.ನಿಂದ 2.10 ಲಕ್ಷ ರೂ.ಗೆ ಏರಿಕೆಯಾಗಿದೆ. ದಿನಭತ್ಯೆ 1500 ರೂ.ನಿಂದ 1800 ರೂ.ಗಳಿಗೆ ಏರಿಕೆ ಮಾಡಲಾಗಿದೆ. ಅದರೊಂದಿಗೆ ವಿಮಾನ, ರೈಲು ಪ್ರಯಾಣ ಭತ್ಯೆಯನ್ನು ವಾರ್ಷಿಕ 2 ಲಕ್ಷ ರೂ.ನಿಂದ 2.50 ಲಕ್ಷ ರೂ.ಗೆ ಏರಿಸಲಾಗಿದೆ.

ಕ್ಷೇತ್ರ ಕಚೇರಿ ನಿರ್ವಹಣೆ, ಡಾಟಾ ಎಂಟ್ರಿ ಆಪರೇಟರ್ ಭತ್ಯೆಯನ್ನೂ ಕೂಡ ಕ್ರಮವಾಗಿ 10,000 ರೂ.ನಿಂದ 30,000 ರೂ.ಗೆ, 12,000 ರೂ.ನಿಂದ 15,000 ರೂ.ಗೆ ಹೆಚ್ಚಿಸಲಾಗಿದೆ. ಮಾಜಿ ಶಾಸಕರಿಗೂ 22,000 ರೂ.ನಿಂದ 36,000 ರೂ.ಗೆ ಹೆಚ್ಚಿಸಲಾಗಿದೆ. ಮುಖ್ಯಮಂತ್ರಿ ವೇತನ 65,000 ರೂ.ನಿಂದ 95,000 ರೂ.ವರೆಗೆ ಏರಿಕೆಯಾಗಿದೆ. ಇದರೊಂದಿಗೆ ಭತ್ಯೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಮಂತ್ರಿಗಳು, ಸ್ಪೀಕರ್, ಡೆಪ್ಯುಟಿ ಸ್ಪೀಕರ್ ವೇತನ ಭತ್ಯೆಯಲ್ಲೂ ಹೆಚ್ಚಳ ಮಾಡಲಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ವೀರಭದ್ರ ಸಿಂಗ್, ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಶಾಸಕರು, ಸಚಿವರ ವೇತನ ಭತ್ಯೆ ಹೆಚ್ಚಿಸುವುದು ಅನಿವಾರ್ಯವಾಗಿತ್ತು ಎಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...