alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣದಲ್ಲಿ ಬಿಸಿಲಿನ ಝಳಕ್ಕೆ 66 ಮಂದಿ ಬಲಿ

hqdefault

ತೆಲಂಗಾಣ ರಾಜ್ಯದಲ್ಲಿ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈಗಾಗಲೇ ಬಿಸಿಲಿನ ಹೊಡೆತಕ್ಕೆ 66 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ.

ಕಳೆದ ವರ್ಷಕ್ಕಿಂತಲೂ ಈ ವರ್ಷ ಅಧಿಕ ಬಿಸಿಲು ಹಾಗೂ ತಡೆಯಲಾರದ ಸೆಖೆ ಇದ್ದು ತೆಲಂಗಾಣ ಸರ್ಕಾರ ಬಿಡುಗಡೆ ಮಾಡಿರುವ ವರದಿಯಂತೆ ಈವರೆಗೂ ಬಿಸಿಲಿನ ತಾಪಕ್ಕೆ 66 ಮಂದಿ ಸಾವನ್ನಪ್ಪಿದ್ದು, ಮೆಹಬೂಬ್ ನಗರ್ ಜಿಲ್ಲೆಯೊಂದರಲ್ಲೇ 28 ಮಂದಿ ಸಾವಿಗೀಡಾಗಿದ್ದರೆ ನಲ್ಗೊಂಡದಲ್ಲಿ 2, ಖಮ್ಮಂ 5, ಕರೀಂನಗರ 5, ಮೇದಕ್ 11, ಅದಿಲಾಬಾದ್ 4, ನಿಜಾಮಾಬಾದ್ ಮತ್ತು ವರಂಗಲ್ ನಲ್ಲಿ 4 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಈ ನಡುವೆ ಕೆಲ ಕಡೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ತಲೆದೋರಿದ್ದು, ಸರ್ಕಾರ ಈಗಾಗಲೇ ಕುಡಿಯುವ ನೀರಿನ ಪೂರೈಕೆಗೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದರೂ ಸಹ ಕೆಲವು ಪ್ರದೇಶಗಳಲ್ಲಿ ನೀರಿನ ತತ್ವಾರ ಹೆಚ್ಚುತ್ತಿದೆ. ಒಟ್ಟಾರೆ ಈ ವರ್ಷ ತೆಲಂಗಾಣದ ಜನತೆ ಬಿಸಿಲಿಗೆ ಕಂಗೆಟ್ಟಿರುವುದಂತೂ ಸತ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...