alex Certify
ಕನ್ನಡ ದುನಿಯಾ       Mobile App
       

Kannada Duniya

ಆಘಾತಕಾರಿ ಸುದ್ದಿ: ಜೈಲಿಗೂ ಕಾಲಿಟ್ಟ ಜಾತಿ…!

ಭಾರತವನ್ನು ಜಾತ್ಯಾತೀತ ದೇಶವನ್ನಾಗಿ‌ ಮಾಡಲು ಅನೇಕರು ಹೋರಾಡುತ್ತಿದ್ದರೆ, ತಮಿಳುನಾಡಿನ ಜೈಲಿನಲ್ಲಿ ಈಗಲೂ‌ ಜಾತಿ ಪದ್ಧತಿ‌ ಜಾರಿಯಲ್ಲಿದೆ. ಈ ಮೂಲಕ‌ ತಪ್ಪು ಮಾಡಿ ಪ್ರಾಯಶ್ಚಿತ್ತಕ್ಕಾಗಿ ಜೈಲಿಗೆ ಬಂದರೂ ಜಾತಿಯ ಹೆಸರಲ್ಲಿ ಸುಖ‌ ಜೀವನ‌‌‌ ನಡೆಸಬಹುದಾಗಿದೆ.

ಒಂದು ಶತಮಾನಕ್ಕೂ ಹೆಚ್ಚಿನ‌ ಇತಿಹಾಸವಿರುವ ತಮಿಳುನಾಡಿನ ಪಲ್ಲಾಕೊಟ್ಟೈ ಕಾರಾಗೃಹದಲ್ಲಿ ಈಗಲೂ ಜಾತಿ ವ್ಯವಸ್ಥೆಯಲ್ಲಿಯೇ ಕೈದಿಗಳನ್ನು ಬೇರ್ಪಡಿಸಿ,‌‌ ಪ್ರತ್ಯೇಕ ಕೋಣೆ ನೀಡುತ್ತಾರೆ ಎನ್ನುವ ಆರೋಪ ಕೇಳಿಬಂದಿದೆ‌.

138 ವರ್ಷ ಹಿಂದಿನ ಈ ಜೈಲಿನಲ್ಲಿ ಈಗಲೂ ದಲಿತ, ತೇವರ್ಸ್ ಸೇರಿದಂತೆ ವಿವಿಧ ಜಾತಿಯ‌‌ ಹೆಸರಲ್ಲಿ ಕೋಣೆಗಳನ್ನು‌‌ ವಿಂಗಡಿಸಲಾಗಿದೆ. ಕಳೆದ 10 ವರ್ಷದಿಂದ ಈ ಪದ್ಧತಿ ನಡೆದುಕೊಂಡು ಬಂದಿದ್ದು, ಕೆಲ‌ ಸಮುದಾಯಕ್ಕೆ ಜೈಲು‌ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ. ಈ ಬಗ್ಗೆ ಈಗಾಗಲೇ ಕಾರಾಗೃಹ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದರೂ, ಯಾವುದೇ ಕೋಣೆ ಬದಲಾಗಿಲ್ಲ ಎಂದು ಜೈಲಿನಿಂದ ಹೊರ ಬಂದ ಕೈದಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಆದರೆ ಈ‌ ಆರೋಪವನ್ನು ತಮಿಳುನಾಡು ಸರಕಾರ ಹಾಗೂ ಕಾನೂನು ಮತ್ತು ಕಾರಾಗೃಹ‌ ಇಲಾಖೆ ಸಚಿವ ಷಣ್ಮುಗಂ‌ ತಳ್ಳಿಹಾಕಿದ್ದು, ರಾಜ್ಯದ ಯಾವುದೇ ಕಾರಾಗೃಹ ದಲ್ಲಿ ಈ ಪದ್ದತಿ ಇಲ್ಲ. ಈ ಬಗ್ಗೆ ಇನ್ನೊಮ್ಮೆ ಬಂಧೀಖಾನೆ ಡಿಜಿಪಿಯಿಂದ ವರದಿ ತರಿಸಿಕೊಳ್ಳುತ್ತೇನೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...