alex Certify
ಕನ್ನಡ ದುನಿಯಾ       Mobile App
       

Kannada Duniya

ಹೋಳಿ ಆಚರಣೆಗಾಗಿ ನಮಾಜ್ ಸಮಯ ಬದಲಿಗೆ ಮನವಿ

ಲಖ್ನೋ ಐಶ್ಬಾಗ್ ಈದ್ಗಾದ ಇಮಾಮ್, ಮೌಲಾನಾ ಖಲೀದ್ ರಶೀದ್ ಫಿರಂಗಿ ಮಹಾಲಿ ಇದೇ ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆಯ ಸಮಯವನ್ನು ಮುಂದಕ್ಕೆ ಹಾಕುವಂತೆ ಮನವಿ ಮಾಡಿದ್ದಾರೆ. ಶುಕ್ರವಾರ ಹೋಳಿ ಹಬ್ಬವಿದೆ. ಮಧ್ಯಾಹ್ನ 12 ರಿಂದ 1 ಗಂಟೆ ಸಮಯದಲ್ಲಿ ಹಿಂದುಗಳು ಹೋಳಿ ಆಡುತ್ತಾರೆ.

ಅದೇ ಸಮಯದಲ್ಲಿ ಮಸೀದಿಗಳಲ್ಲಿ ನಮಾಜ್ ಕೂಡ ನಡೆಯುತ್ತದೆ. ಹಿಂದುಗಳಿಗೆ ಹೋಳಿ ಆಡಲು ಅವಕಾಶ ಮಾಡಿಕೊಡಲು ಐಶ್ಬಾಗ್ ಈದ್ಗಾದಲ್ಲಿ ಶುಕ್ರವಾರದ ಪ್ರಾರ್ಥನೆಯನ್ನು 12.45ರಿಂದ 1.45ರವರೆಗೆ ನಡೆಸಲು ನಿರ್ಧರಿಸಿದ್ದೇವೆ ಅಂತಾ ತಿಳಿಸಿದ್ದಾರೆ.

ಹೋಳಿ ವರ್ಷಕ್ಕೊಮ್ಮೆ ಬರುವ ಹಬ್ಬ, ಹಾಗಾಗಿ ಹಿಂದು ಬಾಂಧವರು ಅದನ್ನು ಆಚರಿಸಲು ಅನುವು ಮಾಡಿಕೊಡಬೇಕು. ನಮಗೂ ಪ್ರಾರ್ಥನೆಗೆ ಅಡ್ಡಿಯಾಗಬಾರದು ಅನ್ನೋ ಕಾರಣಕ್ಕೆ ಈ ರೀತಿ ಮಾಡುವಂತೆ ಹಲವು ಮಸೀದಿಗಳ ಮುಖ್ಯಸ್ಥರಲ್ಲಿ ಖಲೀದ್ ರಶೀದ್ ಮನವಿ ಮಾಡಿದ್ದಾರೆ.

ಹೋಳಿ ಹಬ್ಬಕ್ಕಾಗಿ ನಮಾಜ್ ಸಮಯವನ್ನು ಬದಲಾಯಿಸಿರೋದು ಇದೇ ಮೊದಲು. ಎರಡು ದಿನಗಳ ಹಿಂದಷ್ಟೆ ಹೋಳಿ ಹಬ್ಬದ ಸಿದ್ಧತೆಗಳ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಸಭೆ ನಡೆಸಿದ್ದರು. ಹಬ್ಬದ ಆಚರಣೆ ವೇಳೆ ಶಾಂತಿ ಕಾಪಾಡಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...