alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಮಣಿಪುರ ವಿದ್ಯಾರ್ಥಿನಿಯರ ಈ ಸಾಹಸ

bus

ಕಷ್ಟಗಳೇನೂ ಹೇಳಿ ಕೇಳಿ ಬರೋದಿಲ್ಲ. ನಮ್ಮಲ್ಲಿ ಧೈರ್ಯವಿದ್ರೆ ಎಂತಹ ಪರಿಸ್ಥಿತಿಯನ್ನಾದ್ರೂ ಎದುರಿಸಬಹುದು. ಇದಕ್ಕೆ ಲೇಟೆಸ್ಟ್ ಎಕ್ಸಾಂಪಲ್  ಮಣಿಪುರದ ವಿದ್ಯಾರ್ಥಿನಿಯರು. ಅವರು ಮಾಡಿರುವ ಸಾಹಸ ಈಗ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ವಿದ್ಯಾರ್ಥಿನಿಯರೆಲ್ಲ ಲೋಕ್ತಕ್ ಸರೋವರಕ್ಕೆ ಅಧ್ಯಯನ ಪ್ರವಾಸಕ್ಕಾಗಿ ತೆರಳಿದ್ರು. ಇನ್ನೇನು ಅಲ್ಲಿಂದ ಹೊರಡಬೇಕು ಎನ್ನುವಷ್ಟರಲ್ಲಿ ಬಸ್ ಕೈಕೊಟ್ಟಿದೆ. ಬಸ್ಸಿನ ಚಕ್ರಗಳು ಕೆಸರಿನಲ್ಲಿ ಹೂತು ಹೋಗಿದ್ರಿಂದ ಚಾಲಕ ಎಷ್ಟೇ ಸಾಹಸ ಮಾಡಿದ್ರೂ ಗಾಡಿ ಮುಂದಕ್ಕೆ ಹೋಗಲೇ ಇಲ್ಲ.

ಮುಂದೇನ್ಮಾಡೋದು ಅಂತಾ ವಿದ್ಯಾರ್ಥಿನಿಯರು ಕೈಕಟ್ಟಿ ಕೂರಲಿಲ್ಲ. ಹಗ್ಗವೊಂದನ್ನು ತೆಗೆದುಕೊಂಡು ಬಸ್ ಗೆ ಕಟ್ಟಿ ಎಲ್ಲರೂ ಒಟ್ಟಿಗೆ ಎಳೆದಿದ್ದಾರೆ. ವಿದ್ಯಾರ್ಥಿನಿಯರು ಮಾಡಿದ ಈ ಸಾಹಸದಿಂದಾಗಿ ಬಸ್ ಕೊನೆಗೂ ಕೆಸರಿನಿಂದ ಮೇಲೆ ಬಂದಿದೆ.

ಬೇರೆಯವರ ಸಹಾಯಕ್ಕಾಗಿ ಕಾದು ಕೂರದೇ, ಒಗ್ಗಟಿನಲ್ಲಿ ಬಲವಿದೆ ಅನ್ನೋದನ್ನು ತೋರಿಸಿಕೊಟ್ಟ ವಿದ್ಯಾರ್ಥಿನಿಯರ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...