alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಾತ್ ಮಾಜಿ ಐ.ಪಿ.ಎಸ್. ಅಧಿಕಾರಿಗೆ ಸುಪ್ರೀಂ ಶಾಕ್

ಗುಜರಾತ್ ನ ಮಾಜಿ ಐ.ಪಿ.ಎಸ್. ಅಧಿಕಾರಿ ಸಂಜೀವ್ ಭಟ್ ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಅಹ್ಮದಾಬಾದ್ ನಲ್ಲಿ ಸಂಜೀವ್ ಭಟ್ ಮನೆಯ ಒಂದು ಭಾಗ ಅನಧಿಕೃತ ಜಾಗದಲ್ಲಿ ಕಟ್ಟಿದ್ದು, ಒಡೆಯಲು ಆದೇಶ ನೀಡಿದೆ.

ಅಹ್ಮದಾಬಾದ್ ನಗರ ಪಾಲಿಕೆಯ ವಿರುದ್ಧ ಸಂಜೀವ್, ಸುಪ್ರೀಂ ಮೊರೆ ಹೋಗಿದ್ದರು. ಸಂಜೀವ್ ಭಟ್ ರ ಮನೆಯ ಕೆಲವು ಭಾಗ ಕಾನೂನುಬಾಹಿರ ಎಂದು ಅಹ್ಮದಾಬಾದ್ ಪಾಲಿಕೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸಂಜೀವ್, ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದ್ರೆ, ಸುಪ್ರೀಂ ಕೋರ್ಟ್ ಪಾಲಿಕೆಯ ನಿಲುವನ್ನು ಎತ್ತಿ ಹಿಡಿದಿದೆ.

2012 ರಲ್ಲಿ ಸಂಜೀವ್ ರ ಪಕ್ಕದ ಮನೆಯ ಪ್ರವೀಣ್ ಚಂದ್ರ್, ಅನಧಿಕೃತ ಕಟ್ಟಡ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದ್ದರು. ಅಹ್ಮದಾಬಾದ್ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಕೆಡವಲು ಸೂಚಿಸಿದ್ದರು. ಈ ಕುರಿತು ಸಂಜೀವ್ ಭಟ್ ಪತ್ನಿ ಗುಜರಾತ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಭಟ್ ರ ಪತ್ನಿಯ ಅರ್ಜಿ ವಜಾ ಮಾಡಿ ಕಟ್ಟಡ ಕೆಡವಲು ಆದೇಶ ನೀಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...