alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆ ಅಂದ್ರೆ ಇದೇ ಅಲ್ವೇನ್ರಿ !

pagadiಜಾತಿ, ಧರ್ಮದ ಕಾರಣಕ್ಕಾಗಿ ಇಂದು ವಿಶ್ವದಲ್ಲಿ ಆಶಾಂತಿಯ ಅಲೆಯೆದ್ದಿದೆ. ಆದರೆ ಜಾತಿ, ಧರ್ಮ ಮೀರಿದ ಹಲವು ಪ್ರಕರಣಗಳೂ ವರದಿಯಾಗುವ ಮೂಲಕ ಮಾನವೀಯತೆಯೇ ಮುಖ್ಯ ಎಂಬುದನ್ನು ಸಾರಿ ಹೇಳುವ ಘಟನೆಗಳು ಅಲ್ಲಲ್ಲಿ ಜರುಗುತ್ತಿರುತ್ತವೆ.

ಪಂಜಾಬ್ ನಲ್ಲಿ ಈ ಘಟನೆ ನಡೆದಿದ್ದು, ಸಿಖ್ ವ್ಯಕ್ತಿಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಕಾಲುವೆಯೊಂದರ ಬಳಿ ಜನ ಗುಂಪುಗೂಡಿರುವುದು ಕಂಡು ಬಂದಿದೆ. ಸಹಜ ಕುತೂಹಲದಿಂದ ತಮ್ಮ ಕಾರು ನಿಲ್ಲಿಸಿ ಕಾರಿನಿಂದಿಳಿದ ಅವರಿಗೆ ನಾಯೊಯೊಂದು ಕಾಲುವೆಯಲ್ಲಿ ಸಿಲುಕಿ ಹೊರ ಬರಲಾಗದೆ ಪರಿತಪಿಸುತ್ತಿರುವುದು ಕಂಡು ಬಂದಿದೆ.

ನೆರೆದಿದ್ದ ಜನಸ್ತೋಮ ಕುತೂಹಲದಿಂದ ಆ ದೃಶ್ಯವನ್ನು ವೀಕ್ಷಿಸುತ್ತಿದ್ದರೇ ಹೊರತು ಅದರ ಸಹಾಯಕ್ಕೆ ಧಾವಿಸದಿರುವುದನ್ನು ಕಂಡು ಖೇದಗೊಂಡ ಅವರು, ತಾವು ಧರಿಸಿದ್ದ ಪಗಡಿಯನ್ನೇ ಬಿಚ್ಚಿ ಕಾಲುವೆಗೆ ಇಳಿದು ನಾಯಿಯನ್ನು ಹೊರಗೆಳೆಯಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ಸಿಖ್ ರು ಪಗಡಿಯನ್ನು ತೆಗೆಯಬಾರದೆಂಬ ನಿಯಮವನ್ನು ಮುರಿದ ಅವರನ್ನು ಕಂಡು ಅವಕ್ಕಾದ ಮಂದಿ ಬಳಿಕ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ. ಕಡೆಗೂ ನಾಯಿಯನ್ನು ಸುರಕ್ಷಿತ ತಾಣಕ್ಕೆ ತಲುಪಿಸಿದ ಅವರು ಜಾತಿ, ಧರ್ಮಗಳಿಗಿಂತ ಮಾನವೀಯತೆಯೇ ಮುಖ್ಯ ಎಂಬುದನ್ನು ಸಾರಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...