alex Certify
ಕನ್ನಡ ದುನಿಯಾ       Mobile App
       

Kannada Duniya

ಐಕೆಇಎನಲ್ಲಿ ಸದ್ಯಕ್ಕೆ ಸಿಗಲ್ಲ ವೆಜ್‌ ಬಿರಿಯಾನಿ

ಹೈದರಾಬಾದ್‌: ಐಕೆಇಎ ತನ್ನ ಆಹಾರ ಮಳಿಗೆಯಲ್ಲಿ ವೆಜ್‌ ಬಿರಿಯಾನಿ ಹಾಗೂ ಸಮೋಸ ಮಾರಾಟವನ್ನು ಸ್ಥಗಿತಗೊಳಿಸಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ಗ್ರಾಹಕರೊಬ್ಬರು ಬಿರಿಯಾನಿಯಲ್ಲಿ ಹುಳ ಇದ್ದ ಬಗ್ಗೆ ಗ್ರೇಟರ್‌ ಹೈದರಾಬಾದ್‌ ಮುನ್ಸಿಪಲ್‌ ಕಾರ್ಪೊರೇಷನ್‌ಗೆ ದೂರು ದಾಖಲಿಸಿದ್ದರು.

ಈ ಹಿನ್ನೆಲೆಯಲ್ಲಿ, ಸಂಸ್ಥೆ ಹೈದರಾಬಾದ್‌ನ 1 ಸಾವಿರ ಮಂದಿ ಕುಳಿತುಕೊಳ್ಳುವ ಸಾಮರ್ಥ್ಯವಿರುವ ಹೊಟೇಲ್‌ನಲ್ಲಿ ಸಮೋಸ ಹಾಗೂ ವೆಜ್‌ ಬಿರಿಯಾನಿಯನ್ನು ರದ್ದುಗೊಳಿಸಿದೆ.

ಸಂಸ್ಥೆ, ಪ್ರಕರಣ ಸಂಬಂಧ ಆಂತರಿಕ ತನಿಖೆ ನಡೆಸಲಿದೆ. ಗುಣಮಟ್ಟದ ಆಹಾರ ಒದಗಿಸುವುದು ಜವಾಬ್ದಾರಿಯಾಗಿದ್ದು, ಇದಕ್ಕಾಗಿ ತನಿಖೆ ಪೂರ್ಣವಾಗುವವರೆಗೆ 2 ಆಹಾರ ಉತ್ಪನ್ನದ ಮಾರಾಟ ರದ್ದುಗೊಳಿಸಲಾಗುತ್ತಿದೆ. ಭಾರತದಲ್ಲಿ ಅತಿ ಹೆಚ್ಚು ಹೆಸರು ಮಾಡಿದ್ದ 2 ಉತ್ಪನ್ನಗಳ ಮಾರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದೆ ಎಂದು ಐಕೆಇಎ ತಿಳಿಸಿದೆ.

ಮಳಿಗೆ ಆರಂಭಗೊಂಡ ಮೊದಲ ತಿಂಗಳಲ್ಲಿ ಅತ್ಯುತ್ತಮ ಗ್ರಾಹಕ ವಲಯವನ್ನ ಸಂಸ್ಥೆ ಗಳಿಸಿತ್ತು. ಶೀಘ್ರದಲ್ಲೇ ಈ ಪ್ರಕರಣದ ಆಂತರಿಕ ತನಿಖೆ ಪೂರ್ಣಗೊಳ್ಳಲಿದೆ ಎಂದು ಸಂಸ್ಥೆ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...